ಕರ್ನಾಟಕ ಟಿವಿ : ಕೋವಿಡ್-19 ಲಾಕ್‌ಡೌನ್ ನಿಂದ ರೈತರಿಗಾಗಲಿ ರೈತರ ಪರಿಕರ ಮಾರುಕಟ್ಟೆಗಾಗಲಿ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ಗ್ರಾಹಕರಿಗೂ ತರಕಾರಿ ಬೆಳೆಗಳು ದೊರೆಯುವಂತೆ ಕೃಷಿ ಇಲಾಖೆ ಹಲವು ಮಹತ್ತರ ಕ್ರಮಗಳನ್ನು ಕೈಗೊಂಡಿದೆ. ಈ ಬಗ್ಗೆ ರಾಜ್ಯದ ಜಿಲ್ಲೆಗಳಲ್ಲಿ ಯಾವ ರೀತಿಯ ಹೆಜ್ಜೆ ಇಡಲಾಗಿದೆ. ರೈತರ ಸ್ಥಿತಿಗತಿಗಳೇನು ಎಂಬುದನ್ನು ಅವಲೋಕಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ವತಃ ಅವರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಏಪ್ರಿಲ್ 5 ಸೋಮವಾರದಂದು ಧಾರವಾಡ, ಬೆಳಗಾವಿ, ಬಾಗಲಕೋಟೆ , ಏ.7ರಂದು ಬಿಜಾಪುರ, ಕಲಬುರಗಿ,ಬೀದರ್ ಏ.8ರಂದು ಯಾದಗಿರಿ,ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ 9ರಂದು ಗದಗ್, ಹಾವೇರಿ ಏ.10ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ 11 ರಂದು ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಈ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿದ್ದಾರೆ.
ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಪೊಲೀಸ್, ಕೃಷಿ,ತೋಟಗಾರಿಕಾ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಎಲ್ಲಾಇಲಾಖೆಗಳ ಜೊತೆ ಸಭೆ ನಡೆಸಲಿದ್ದಾರೆ.ಸಭೆಯಲ್ಲಿ ರೈತರು,ಕೃಷಿ ಉತ್ಪನ್ನಗಳ ಸರಕು ಸಾಗಾಣಿಕೆ,ಬೀಜ ಗೊಬ್ಬರಗಳ ಸರಬರಾಜು ಹಾಗೂ ಉಳಿದಂತಹ ಕೃಷಿ ಚಟುವಟಿಕೆಗಳ ಕುರಿತು ಚರ್ಚೆ ನಡೆಸಲಿದ್ದಾರೆ.