Thursday, May 30, 2024

Latest Posts

ಶಾಸಕರು ನೀಡಿರುವ ಕುಕ್ಕರ್ ಅಡುಗೆ ಮಾಡುವ ಸಮಯದಲ್ಲಿ ಬ್ಲಾಸ್ಟ್

- Advertisement -

political news :

ಕಳೆದ ಐದು ವರ್ಷಗಳಿಂದ ಕಾಲಹರಣ ಮಾಡುತಿದ್ದ ರಾಜಕೀಯ ನಾಯಕರು ಈಗ ಫುಲ್ ಚಟುವಟಿಕೆಯಿಂದ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತಿದ್ದಾರೆ. ಚುನಾವಣಾ ಸಮೀಪಿಸುತಿದ್ದಂತೆ ಕ್ಷೇತ್ರದ ತುಂಬಾ ಓಡಾಡಿ ಜನಗಳಿಗೆ ಹಣ ಸರಾಯಿ , ಮಹಿಳೆಯರಿಗೆ ಸೀರೆ ಕುಕ್ಕರ್ ,ಶಾಲಾ ಮಕ್ಕಳಿಗೆ  ಬ್ಯಾಗು ಪೆನ್ನು ಪೆನ್ಸಿಲ್ ಹಾಗೂ ಇನ್ನಿತರ ವಸ್ತುಗಳನ್ನು ಶಾಸಕರು ನೀಡಿ ಮತದಾರರನ್ನು ಸೆಳೆಯಲು ಪ್ರಯತ್ನ ಪಡುತಿದ್ದಾರೆ . ಅದೇ ರೀತಿ ಚಿಕ್ಕ ಮಗಳೂರು ಜಿಲ್ಲೆಯ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರೇ ನೀಡಿದ್ದಾರೆ ಎನ್ನಲಾದ ಕುಕ್ಕರ್ ಮನೆಯಲ್ಲಿ ಸ್ಫೋಟಗೊಂಡಿದೆ. ಇದರಿಂದ ಕುಕ್ಕರ್ ತೆಗೆದುಕೊಂಡ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದಲ್ಲಿ ದೇವರಾಜ್ ಎಂಬುವರ ಮನೆಯಲ್ಲಿ ತರಕಾರಿ ಬೇಯಿಸಲು ಇಟ್ಟಿದ್ದಾಗ ಕುಕ್ಕರ್ ಸ್ಫೋಟಗೊಂಡಿದೆ. ಮತದಾರರನ್ನು ಸೆಳೆಯಲು ಹಂಚಲಾಗಿದ್ದ ಕುಕ್ಕರ್ ಸ್ಫೋಟಗೊಂಡಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ತಾಯಿ, ಮಗು ಹೊರಗಡೆ ಇದ್ದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಹೀಗಾಗಿ ಕಳಪೆ ಕುಕ್ಕರ್ ನೀಡಿ ಜನರ ಜೀವದ ಜೊತೆ ಚಲ್ಲಾಟ ಆಡ್ತಿದ್ದಾರೆಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಕಿಂಗ್ ಚಾರ್ಲ್ಸ್ಗೆ ಬರ್ಗರ್ ಕಿಂಗ್ ಕಿರೀಟ್ ಕೊಡಲು ಮುಂದಾದ ಫ್ಯಾನ್.. ಆಮೇಲೇನಾಯ್ತು..?

ಅಮೆರಿಕದ ಗುರುದ್ವಾರದಲ್ಲಿ ಗುಂಡಿನ ದಾಳಿ, ಇಬ್ಬರಿಗೆ ಗಂಭೀರ ಗಾಯ..

ಉದ್ಯೋಗಿಗಳ ವಜಾಗೊಳಿಸುವ ಪ್ರಕ್ರಿಯೆಯಲ್ಲಿ ನಾ ಮುಂದು, ತಾ ಮುಂದು ಎನ್ನುತ್ತಿರುವ ಸಂಸ್ಥೆಗಳು

- Advertisement -

Latest Posts

Don't Miss