Monday, July 22, 2024

Latest Posts

ಅಮೆರಿಕದ ಗುರುದ್ವಾರದಲ್ಲಿ ಗುಂಡಿನ ದಾಳಿ, ಇಬ್ಬರಿಗೆ ಗಂಭೀರ ಗಾಯ..

- Advertisement -

ಅಮೆರಿಕಾದ ಕ್ಯಾಲಿಫೋರ್ನಿಯಾ ಬಳಿ ಗುರು ದ್ವಾರದಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಗೆ ಕಾರಣವೇನೆಂದು ಸರಿಯಾಗಿ ತಿಳಿದು ಬಂದಿಲ್ಲ. ಯಾವುದೇ ದ್ವೇಷದಿಂದ ಈ ಕೆಲಸ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.

ಗುಂಡಿನ ದಾಳಿ ನಡೆಯುವುದಕ್ಕೂ ಮೊದಲು, ಗುರುದ್ವಾರದಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿತ್ತು. ಈ ಜಗಳ ಹೊಡೆದಾಟಕ್ಕೆ ತಿರುಗಿ, ನಂತರ ಓರ್ವ ವ್ಯಕ್ತಿ ಜಗಳವಾಡುತ್ತಿದ್ದವನ ಸ್ನೇಹಿತನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆಂದು, ಅದನ್ನು ನೋಡಿದ ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಅಲ್ಲದೇ, ಗುಂಡು ಹೊಡೆಸಿಕೊಂಡವನ ಸ್ನೇಹಿತ, ಗುಂಡು ಹೊಡೆದವನಿಗೆ ಪ್ರತಿಯಾಗಿ, ಗುಂಡು ಹಾರಿಸಿ, ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಸ್ಥಳದಲ್ಲಿದ್ದ ಸಿಸಿ ಟಿವಿ ಕ್ಯಾಮೆರಾಗಳನ್ನ ಚೆಕ್ ಮಾಡಿದ್ದಾರೆ. ಶಂಕಿತ ವ್ಯಕ್ತಿಗಳು 20ರಿಂದ 30ರ ಹರಯದವರಾಗಿದ್ದು, ಅವರನ್ನು ಹುಡುಕುವ ಕೆಲಸ ನಡೆಯುತ್ತಿದೆ ಎಂದು ತಿಳಿಸಲಾಗಿದೆ.

ಆತ್ಮ ಹತ್ಯಗೆ ಶರಣಾದ ಬೋಜಪುರಿ ನಟಿ ಆಕಾಂಕ್ಷಾ

ಅಫ್ಘಾನಿಸ್ತಾನದಲ್ಲಿ ಬಾಂಬ್ ದಾಳಿ, 2 ಸಾವು, 12 ಜನರಿಗೆ ಗಾಯ..

ಚಿನ್ನದ ಪದಕಕ್ಕೆ ಮುತ್ತಿಟ್ಟು ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಬಾಕ್ಸರ್

- Advertisement -

Latest Posts

Don't Miss