Tuesday, August 5, 2025

Latest Posts

ಕರ್ನಾಟಕ ಬಂದ್ ಗೆ ಧಾರವಾಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ – ಜಿಲ್ಲಾಧಿಕಾರಿ ಸ್ಫಷ್ಟನೆ..

- Advertisement -

ಹುಬ್ಬಳ್ಳಿ:  ಕಾವೇರಿ ನದಿ ನೀರು ಹಂಚಿಕೆ ವಿಚಾರ ಕುರಿತಂತೆ ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಇಲ್ಲಾ ಎಂದು ಜಿಲ್ಲಾಧಿಕಾರಿ ಗುರುದತ್ತ್ ಹೆಗಡೆ ಹೇಳಿದ್ದಾರೆ.

ಕರ್ನಾಟಕ ಟಿವಿ ಜೊತೆ ಮಾತನಾಡಿದ ಅವರು ನಮ್ಮಲ್ಲಿ ಅಂತಹ ಯಾವುದೇ ಪರಸ್ಥಿತಿ ಇರೋದಿಲ್ಲ ಹೀಗಾಗಿ ನಾಳೆಯ ಕರ್ನಾಟಕ ಬಂದ್ ಗೆ ಯಾವುದೇ ರೀತಿಯಲ್ಲಿ ರಜೆಯನ್ನು ಘೋಷಣೆ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಇನ್ನೂ ಬಂದ್ ಮುಂಜಾಗೃತೆಯ ಹಿನ್ನೆಲೆಯಲ್ಲಿ ಕೆಲವೊಂದಿಷ್ಟು ಕ್ರಮಗಳನ್ನು ಬೇರೆ ಬೇರೆ ರೀತಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದಕ್ಕೆ ರಾಜ್ಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕಳೆದ ಒಂದು ವಾರದಿಂದ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಹೋರಾಟ ಮಾಡುತ್ತಿದೆ. ಸೆ. 29ರಂದು ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಂದ್‌ಗೆ ಧಾರವಾಡ ಜಿಲ್ಲೆಯಿಂದ ಬೆಂಬಲ ವ್ಯಕ್ತವಾಗಿದೆ. ಉತ್ತರ ಕರ್ನಾಟಕ ಭಾಗದ ಮಹದಾಯಿ ಹೋರಾಟಗಾರರು ಹಾಗೂ ಇತರೆ ಸಂಘಟನೆಗಳು ಕರ್ನಾಟಕ ಬಂದ್ ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅಂದು ಧಾರವಾಡ ಬಂದ್ ಮಾಡಲು ನಿರ್ಧಾರ ಮಾಡಿದ್ದಾರೆ.

ಬೆಳಗ್ಗೆ 6ರಿಂದ ಮಧ್ಯಾಹ್ನ 3ರವರೆಗೆ ಧಾರವಾಡ ಬಂದ್‌ಗೆ ನಿರ್ಧಾರ ಮಾಡಿಕೊಂಡಿದ್ದಾರೆ. ಸಂಘಟನೆಗಳ ಸಭೆಯಲ್ಲಿ ಬಂದ್ ಬೆಂಬಲಿಸಲು ನಿರ್ಧಾರ ವ್ಯಕ್ತಪಡಿಸಿದ್ದು, 40ಕ್ಕೂ ಹೆಚ್ಚು ಸಂಘಟನೆಗಳು ಕೈ ಜೋಡಿಸುವ ಸಾಧ್ಯತೆಯಿದೆ. ಮಹದಾಯಿ ಬಂದ್ ಮಾದರಿಯಲ್ಲಿಯೇ ಕಾವೇರಿ ಬಂದ್ ಮಾಡಲು ನಿರ್ಧಾರ ಮಾಡಿದ್ದಾರೆ. ಕಾವೇರಿ, ಮಹದಾಯಿ‌ ಎನ್ನದೇ ರಾಜ್ಯದ ಹಿತದೃಷ್ಟಿಯಿಂದ ಉತ್ತರ ಕರ್ನಾಟಕ ಭಾಗದಿಂದ ಬಂದ್ ಗೆ ಬೆಂಬಲ ವ್ಯಕ್ತವಾಗಿದ್ದು, ಜಿಲ್ಲೆ ಸಹ ಅಂದು ಸ್ಥಬ್ದವಾಗುವ ಸಾಧ್ಯತೆಯಿದೆ.

Khillari Ox : ಬೆಳಗಾವಿ : ಧಾಖಲೆ ಮೊತ್ತಕ್ಕೆ ಮರಾಟವಾದ ಖಿಲ್ಲಾರಿ ಎತ್ತು

Police: ಮಗಳಿಗಾಗಿ ಯುವಕನ ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾದ ತಂದೆ..!

Net marketing: ತರಬೇತಿ ನೀಡುವುದಾಗಿ ವಿದ್ಯಾರ್ಥಿಗಳಿಂದ ಹಣ ಲೂಟಿ..!

 

- Advertisement -

Latest Posts

Don't Miss