ಅಡಿಜಾರಿ ಬೀಳುವುದು, ತಡವಿಕೊಂಡೇಳುವುದು,ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು, ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು ಮಾಜಿ ಲಕ್ಕಿ ಡಿಪ್ ಸಿಎಂ ಹೆಚ್ ಡಿ ಕೆ ಅವರಿಗೆ ಇದೇ ಬದುಕು ತಾನೇ? ಎಂಬುದಾಗಿ ಬಿಜೆಪಿ ಅವರ ವಿರುದ್ಧ ಕಿಡಿಕಾರಿದೆ.
ಇಂದು ಸರಣಿ ಟ್ವಿಟ್ ಮಾಡಿರುವಂತ ಕರ್ನಾಟಕ ಬಿಜೆಪಿಯು, ಕುಮಾರಸ್ವಾಮಿಯವರೇ, ನೀವೆಷ್ಟೇ ದಾರ್ಶನಿಕನ ಸೋಗು ಹಾಕಿದರೂ ಅದರ ಹಿಂದಿರುವುದು ಪ್ರತ್ಯೇಕ ಲೆಕ್ಕಾಚಾರವೇ. ನಿಮ್ಮಂತವರ ಯೂಟರ್ನ್ ನೀತಿಗಾಗಿಯೇ ಕಗ್ಗದಲ್ಲಿ ಸಾಲೊಂದು ರಚಿತವಾಗಿದೆ ಎಂದಿದೆ.
ಕುಮಾರಸ್ವಾಮಿಯವರೇ,
ನೀವೆಷ್ಟೇ ದಾರ್ಶನಿಕನ ಸೋಗು ಹಾಕಿದರೂ ಅದರ ಹಿಂದಿರುವುದು ಪ್ರತ್ಯೇಕ ಲೆಕ್ಕಾಚಾರವೇ.
ನಿಮ್ಮಂತವರ ಯೂಟರ್ನ್ ನೀತಿಗಾಗಿಯೇ ಕಗ್ಗದಲ್ಲಿ ಸಾಲೊಂದು ರಚಿತವಾಗಿದೆ…#ಗಾಳಿಪಟಎಚ್ಡಿಕೆ
— BJP Karnataka (@BJP4Karnataka) April 4, 2022
ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ?, ಮೀನು ನೀರೊಳು ನುಸುಳೆ ಪಥನಿಯಮವಿಹುದೆ?, ಏನೊ ಜೀವನವನೆಳೆವುದೇನೊ ನೂಕುವುದದನು, ನೀನೊಂದು ಗಾಳಿಪಟ – ಮಂಕುತಿಮ್ಮ ಎಂಬುದಾಗಿ ಮಂಕು ತಿಮ್ಮನ ಕಗ್ಗವನ್ನು ಉಲ್ಲೇಖಿಸಿರುವಂತ ಕರ್ನಾಟಕ ಬಿಜೆಪಿ, ಎಚ್‌ಡಿಕೆ ಎಂದರೆ ಗಾಳಿಪಟ, ಸ್ವಂತಿಕೆ ಇಲ್ಲದ ರಾಜಕಾರಣಿ ಎಂದು ಹೇಳಿದೆ.
ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ?
ಮೀನು ನೀರೊಳು ನುಸುಳೆ ಪಥನಿಯಮವಿಹುದೆ?
ಏನೊ ಜೀವನವನೆಳೆವುದೇನೊ ನೂಕುವುದದನು ।
ನೀನೊಂದು ಗಾಳಿಪಟ – ಮಂಕುತಿಮ್ಮ।।ಎಚ್‌ಡಿಕೆ ಎಂದರೆ ಗಾಳಿಪಟ, ಸ್ವಂತಿಕೆ ಇಲ್ಲದ ರಾಜಕಾರಣಿ.#ಗಾಳಿಪಟಎಚ್ಡಿಕೆ
— BJP Karnataka (@BJP4Karnataka) April 4, 2022
ಕರ್ನಾಟಕದ ರಾಜಕಾರಣದಲ್ಲಿ ಎಚ್‌ಡಿಕೆ ಅವರಂತಹ ಗಾಳಿಪಟದ ವ್ಯಕ್ತಿತ್ವ ಹೊಂದಿರುವ ರಾಜಕಾರಣಿ ಮತ್ತೊಬ್ಬರಿಲ್ಲ. ಆವ ಕಡೆ ಹಾರುವುದೋ! ಆವ ಕಡೆ ತಿರುಗುವುದೋ? ಆವಾಗಳಾವ ಕಡೆಗೆರಗುವುದೋ ಹಕ್ಕಿ! ಎಂಬಂತಿದೆ ಎಚ್‌ಡಿಕೆ ರಾಜಕೀಯ ಧೋರಣೆ. ಸ್ವಂತಿಕೆ ಇಲ್ಲದವರು ವಾಜಪೇಯಿ ಅವರಂಥವರನ್ನೂ ಟೀಕಿಸುವುದು ಚೋದ್ಯವಲ್ಲದೆ ಮತ್ತೇನು? ಎಂದು ಕರ್ನಾಟಕ ಬಿಜೆಪಿ ಪ್ರಶ್ನಿಸಿದೆ.
ಕರ್ನಾಟಕದ ರಾಜಕಾರಣದಲ್ಲಿ ಎಚ್‌ಡಿಕೆ ಅವರಂತಹ ಗಾಳಿಪಟದ ವ್ಯಕ್ತಿತ್ವ ಹೊಂದಿರುವ ರಾಜಕಾರಣಿ ಮತ್ತೊಬ್ಬರಿಲ್ಲ.
ಆವ ಕಡೆ ಹಾರುವುದೋ!
ಆವ ಕಡೆ ತಿರುಗುವುದೋ?
ಆವಾಗಳಾವ ಕಡೆಗೆರಗುವುದೋ ಹಕ್ಕಿ!
ಎಂಬಂತಿದೆ ಎಚ್‌ಡಿಕೆ ರಾಜಕೀಯ ಧೋರಣೆ.ಸ್ವಂತಿಕೆ ಇಲ್ಲದವರು ವಾಜಪೇಯಿ ಅವರಂಥವರನ್ನೂ ಟೀಕಿಸುವುದು ಚೋದ್ಯವಲ್ಲದೆ ಮತ್ತೇನು?#ಗಾಳಿಪಟಎಚ್ಡಿಕೆ
— BJP Karnataka (@BJP4Karnataka) April 4, 2022
ಅಡಿಜಾರಿ ಬೀಳುವುದು, ತಡವಿಕೊಂಡೇಳುವುದು । ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು ॥ ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು ಎಂದು ಹೇಳಿದ್ದು, ಲಕ್ಕಿ ಡಿಬ್ ಸಿಎಂ ಹೆಡ್ ಡಿ ಕೆ ಅವರಿಗೆ ಇದೇ ಬದುಕು ತಾನೇ? ಎಂದು ಹೇಳಿದೆ.
ಅಡಿಜಾರಿ ಬೀಳುವುದು, ತಡವಿಕೊಂಡೇಳುವುದು ।
ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು ॥
ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು |ಮಾಜಿ #LuckyDipCMHDK ಅವರಿಗೆ ಇದೇ ಬದುಕು ತಾನೇ?#ಗಾಳಿಪಟಎಚ್ಡಿಕೆ
— BJP Karnataka (@BJP4Karnataka) April 4, 2022




