ಹುಬ್ಬಳ್ಳಿ: ಮರಾಠ ಮೀಸಲಾತಿಗೆ ಆಗ್ರಹಿಸಿ ಮಹಾರಾಷ್ಟ್ರದಲ್ಲಿ ಕೈಗೊಂಡ ಅನಿರ್ದಿಷ್ಟಾವಧಿ ಹೋರಾಟ ಹಿಂಸಾಚಾರ ರೂಪ ಪಡೆದಿದೆ. ಆರು ಬಸ್ಸುಗಳಿಗೆ ಬೆಂಕಿ ಹಚ್ಚಲಾಗಿದ್ದು, ಇದರಲ್ಲಿ ಕರ್ನಾಟಕದ ಎರಡು ಬಸ್ಸುಗಳು ಸುಟ್ಟು ಕರಕಲಾಗಿವೆ. ಅಂದಾಜು 85 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣ ಎಚ್ಚರಿಕೆ ನೀಡಿದೆ.
ಈ ಕುರಿತು ಮಾತನಾಡಿದ ಜಿಲ್ಲಾಧ್ಯಕ್ಷ ಮಂಜುನಾಥ ಲೂತಿಮಠ, ಮಹಾರಾಷ್ಟ್ರದ ಜಾಲನಾ ಜಿಲ್ಲೆಯ ವಿವಿಧೆಡೆ ಕೆಲವು ದಿನಗಳಿಂದ ಮರಾಠಾ ಮೀಸಲಾತಿಗಾಗಿ ಪ್ರತಿಭಟನೆಗಳು ನಡೆದಿವೆ. ಜಾಲನಾ ಜಿಲ್ಲೆಯ ಶಹಘಡ ಬಳಿ ನಡೆದ ಹೋರಾಟದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಆದರೆ ಇದರಲ್ಲಿ ಕರ್ನಾಟಕದ ಬಸ್ಸಿಗೆ ಬೆಂಕಿ ಹಚ್ಚಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಖಾರವಾಗಿಯೇ ನುಡಿದರು.
ನಾವು ಕೂಡ ಮಹಾರಾಷ್ಟ್ರದ ಬಸ್ಸಿಗೆ ಬೆಂಕಿ ಹಚ್ಚಿ ಕ್ರೌರ್ಯಕ್ಕೆ ಕ್ರೌರ್ಯದಿಂದಲೇ ಉತ್ತರ ಕೊಟ್ಟಾಗ ಮಾತ್ರವೇ ಮಹಾರಾಷ್ಟ್ರದ ಪುಂಡರಿಗೆ ಅರ್ಥವಾಗುತ್ತದೆ. ನಮ್ಮನ್ನು ತಡೆಯಬೇಡಿ ನಾವು ಕೂಡ ಮಹಾರಾಷ್ಟ್ರದ ಗಡಿಗೆ ಹೋಗಿ ಮಹಾರಾಷ್ಟ್ರದ ಇಲಾಖೆಗೆ ಬೆಂಕಿ ಹಚ್ಚಿ ಪ್ರತ್ಯುತ್ತರ ನೀಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.
Yatindra Siddaramaiah: ಹಾಸನಕ್ಕೆ ಮೊದಲ ಬಾರಿ ಯತೀಂದ್ರ ಸಿದ್ದರಾಮಯ್ಯ;
Byrathi Suresh: ರಾಜ್ಯದಲ್ಲಿ ಇನ್ನೊಬ್ಬ ಸಿದ್ದರಾಮಯ್ಯ ಹುಟ್ಟಲು ಸಾಧ್ಯವಿಲ್ಲ;
Cricket: ಪಾಕ್ ವಿರುದ್ದ ಭಾರತ ಗೆಲುವು ಸಾಧಿಸಲಿ ಎಂದು ಕ್ರೀಡಾಭಿಮಾನಿಗಳಿಂದ ಪೂಜೆ..!