Tuesday, July 22, 2025

Latest Posts

KARNATAKA: ರಾಜ್ಯದ ಗೃಹಲಕ್ಷ್ಮಿ ಜಿಲ್ಲೆ! ಅಂಗಡಿ ತೆರೆದ ಮಹಿಳೆ!

- Advertisement -

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೂ ಒಂದು. ಸದ್ಯ ಗೃಹಲಕ್ಷ್ಮೀ ಯೋಜನೆ ಪ್ರಗತಿಯಲ್ಲಿ ಚಾಮರಾಜನಗರ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.. ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆಯ 2 ಲಕ್ಷದ 77ಸಾವಿರದ 547 ಫಲಾನುಭವಿಗಳಲ್ಲಿ 2,73,414 ಮಂದಿಗೆ ಈ ಯೋಜನೆ ತಲುಪಿದೆ. ಶೇ.98.51ರಷ್ಟು ಪ್ರಗತಿ ಹೊಂದುವ ಮೂಲಕ ರಾಜ್ಯದಲ್ಲೇ ಚಾಮರಾಜ ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಅಂತ ಸುದ್ದಿಗೋಷ್ಠಿಯಲ್ಲಿ ಸಂತಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಪ್ರಗತಿ ಪರಿಶೀಲನಾ ಸಭೆ ನಡೀತು.. ದಕ್ಷಿಣ ಕನ್ನಡ, ಮಂಡ್ಯ, ಮೈಸೂರಿನ ಬಳಿಕ ಚಾ.ನಗರದಲ್ಲಿ ಸಭೆ ಮಾಡಲಾಗಿದೆ. ಇನ್ನು ಮುಂದಿ ದಿನಗಳಲ್ಲಿ ಪ್ರತಿ ತಾಲೂಕಿನಲ್ಲೂ ಸಭೆ ಆಯೋಜನೆ ಮಾಡುವ ಮೂಲಕ ಫಲಾನುಭವಿಗಳನ್ನು ನೇರವಾಗಿ ತಲುಪಿ ಅವರಿಂದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲಾಗುವುದು,” ಎಂದರು.

 

 

ಇನ್ನು ಶಿವಮೊಗ್ಗ ಸಮೀಪದ ಯಡೇಹಳ್ಳಿ ಗ್ರಾಮದ ಖುರ್ಷಿದಾ ರಾಜ್ಯ ಸರಕಾರದ ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಹಣದಿಂದ ಚಿಲ್ಲರೆ ಅಂಗಡಿ ತೆರೆಯುವ ಮೂಲಕ ಮಾದರಿ ಹೆಜ್ಜೆ ಇರಿಸಿದ್ದಾರೆ.

ಬಡ ಕುಟುಂಬದ ಖುರ್ಷಿದಾ ಅವರ ಮಗ 14 ವರ್ಷದ ಹಿಂದೆ ಹಾಗೂ ಪತಿ 12 ವರ್ಷದ ಹಿಂದೆ ತೀರಿಕೊಂಡಿದ್ದು, ಏಕಾಂಗಿಯಾಗಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈಗವರು ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿ ತಿಂಗಳು ಬಂದ 2000 ರೂ. ಕೂಡಿಟ್ಟು ಚಿಕ್ಕದಾದ ಅಂಗಡಿ ತೆರೆದು ಜೀವನಕ್ಕೆ ಆಸರೆ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರನ್ನು ಕರೆದು ಅಂಗಡಿ ಉದ್ಘಾಟನೆ ಮಾಡಿದರು. ಯುವ ಕಾಂಗ್ರೆಸ್‌ ಅಧ್ಯಕ್ಷ ಎಂ.ಮನು, ಗ್ರಾ.ಪಂ. ಸದಸ್ಯ ಮಹಮದ್‌ ಅಲಿ, ಎಸ್‌.ಎಂ.ಹಾಲೇಶಪ್ಪ, ನಾಗರಾಜ್‌ ಗೌಡ, ಪಿ.ಎನ್‌.ಜಗದೀಶ್‌, ಸಾಹಿಲ್‌, ಇಮ್ರಾನ್‌, ಆದಿಲ್‌, ಬಾಷಾ ಮತ್ತಿತರರು ಇದ್ದರು.

ಅಂದಹಾಗೆ ಗೃಹಲಕ್ಷ್ಮೀ ಹಣ 2 ತಿಂಗಳಿಂದ ಬಾಕಿಯಾಗಿದ್ದು ಮಹಿಳೆಯರು ಕಳವಳಗೊಂಡಿದ್ದಾರೆ. ಈ ಬಗ್ಗೆ ಶಿವಮೊಗ್ಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ 3,85,949 ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿದ್ದಾರೆ. ಎಲ್ಲರಿಗೂ ಮಾಸಿಕ 76.85 ಕೋಟಿ ರೂ. ಸಂದಾಯವಾಗುತ್ತಿದೆ. ಅಕ್ಟೋಬರ್‌ ಅಂತ್ಯದವರೆಗೆ 2000 ರೂ. ಭತ್ಯೆ ಜಮೆಯಾಗಿದೆ. ಎನ್‌ಪಿಸಿಐ ತಾಂತ್ರಿಕ ತೊಂದರೆಯಿಂದ 1755 ಫಲಾನುಭವಿಗಳಿಗೆ ಡಿಬಿಟಿ ಆಗಿಲ್ಲ. ನಿರಂತರವಾಗಿ ಈ ತಾಂತ್ರಿಕ ದೋಷ ನಿವಾರಣೆ ಮಾಡಲಾಗುತ್ತಿರುತ್ತದೆ ಅಂತ ಮಾಹಿತಿ ನೀಡಿದರು.

- Advertisement -

Latest Posts

Don't Miss