- Advertisement -
ಕರ್ನಾಟಕ ಟಿವಿ : ಮುಖ್ಯಮಂತ್ರಿ ಯಡಿಯೂರಪ್ಪ ಸಂಫುಟ ವಿಸ್ತರಣೆ ಗೊಂದಲದ ನಡುವೆ ದಾವೋಸ್ ಗೆ ಪ್ರಯಾಣ ಬೆಳೆಸಿದ್ರು.. ಜಾಗತಿಕ ಹೂಡಿಕೆದಾರರ ಮೂರು ದಿನಗಳ ಸಮಾವೇಶದಲ್ಲಿ ಭಾಗಿತ್ತಿರುವ ಸಿಎಂರನ್ನ ಡಿಸಿಎಂ ಡಾ ಅಶ್ವಥ್ ನಾರಾಯಣ್ ಸೇರಿದಂತೆ ಸಂಪುಟ ಸಚಿವರು ಬೀಳ್ಕೊಟ್ರು.. ಸಂಪುಟ ವಿಸ್ತರಣೆಗೆ ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಡದಿರೋದಕ್ಕೆ ಬೇಸರ ಗೊಂಡಿರುವ ಯಡಿಯೂರಪ್ಪ ಮೊದಲು ದಾವೋಸ್ ಗೆ ಚಳಿಯ ಕಾರಣ ನೀಡಿ ಗೈರಾಗಲು ಮುಂದಾಗಿದ್ರು.. ಆದ್ರೆ ತಾವು ದಾವೋಸ್ ಗೆ ತೆರಳಲೇ ಬೇಕು ಅಂತ ಹೈಕಮಾಂಡ್ ಆದೇಶ ಬಂದ ಮೇಲೆ ಕೋಪವನ್ನ ನುಂಗಿಕೊಂಡು ಯಡಿಯೂರಪ್ಪ ವಿಮಾನ ವೇರಿದ್ದಾರೆ.. ಹೊರಡುವ ಮುನ್ನ ಎಂದಿನಂತೆ ದಾವೋಸ್ ನಿಂದ ವಾಪಸ್ ಬಂದಮೇಲೆ ಎರಡ್ಮೂರು ದಿನದಲ್ಲಿ ಸಂಪುಟ ವಿಸ್ತರಣೆ ಮಾಡೋದಾಗಿ ಹೇಳಿದ್ದಾರೆ.. ಬೆಂಗಳೂರಿನಿಂದ ದುಬೈ ಮೂಲಕ ಪ್ಯಾರೀಸ್ ತಲುಪಲಿರುವ ಮುಖ್ಯಮಂತ್ರಿಗಳು ನಂತರ ದಾವೋಸ್ ಕಡೆ ಪ್ರಯಾಣ ಬೆಳೆಸಲಿದ್ದಾರೆ..
- Advertisement -


