Bengaluru News: ಬೆಂಗಳೂರು : ಪ್ರಸ್ತುತ ಜಗತ್ತಿನ ಮುಂಚೂಣಿ ಮಾಧ್ಯಮ ಡಿಜಿಟಲ್ ಮಾಧ್ಯಮ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.. ಆದರೆ ಸರ್ಕಾರದ ಮಟ್ಟದಲ್ಲಿ ಡಿಜಿಟಲ್ ಮಾಧ್ಯಮಗಳ ಮಾನ್ಯತೆ ಇರಲಿಲ್ಲ.. ಹೀಗಾಗಿ ಡಿಜಿಟಲ್ ಮಾಧ್ಯಮಗಳಿಗೆ ಮಾನ್ಯತೆ ದೊರಕಿಸಿಕೊಡುವ ಉದ್ದೇಶ ಹಾಗೂ ಡಿಜಿಟಲ್ ಮಾಧ್ಯಮಗಳ ವೃತ್ತಿಪರ ಪತ್ರಕರ್ತರ ಉಳಿವಿಗಾಗಿ ಟಿವಿ ಹಾಗೂ ಪತ್ರಿಕೆಗಳ ಮಾದರಿಯಲ್ಲೇ ಡಿಜಿಟಲ್ ಮಾಧ್ಯಮಗಳಿಗೆ ಜಾಹೀರಾತು ಪಡೆಯುವ ಮೂಲ ಉದ್ದೇಶದಿಂದ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ಸ್ಥಾಪಿಸಲಾಗಿತ್ತು.
24-08-2022 ರಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ಅಡಿಯಲ್ಲಿ ಸ್ಥಾಪಿತವಾದ ಸಂಸ್ಥೆ ಈ ದಿಸೆಯಲ್ಲಿ ಸಾಕಷ್ಟು ಶ್ರಮ ಹಾಕಿದೆ. 10-06-2023 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ವಾರ್ತಾ ಇಲಾಖೆಯ ಆಯುಕ್ತರಿಗೆ ಡಿಜಿಟಲ್ ಮಾಧ್ಯಮಗಳ ಮಾನ್ಯತೆ & ಜಾಹೀರಾತು ನೀಡುವ ಕುರಿತು ಮನವಿ ಮಾಡಲಾಗಿತ್ತು. 22-08-2023 ರಂದು ನಮ್ಮ ಮನವಿಗೆ ಪತ್ರದ ಮೂಲಕ ಉತ್ತರಿಸಿದ್ದ ವಾರ್ತಾ & ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ರಾಮಲಿಂಗಪ್ಪ ನಿಮ್ಮ ಬೇಡಿಕೆ ಪರಿಶೀಲನೆ ಹಂತದಲ್ಲಿದ್ದು ಅನುಮೋದನೆಯಾದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ರು.
ಸರಿಯಾಗಿ 1 ವರ್ಷದ ತರುವಾಯ ಅದೇ ದಿನಾಂಕದಂದು 22-08-2024 ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ ಬಿಡುಗಡೆಯಾಗಿದೆ. ಇದು ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂಗೆ ಸಂದ ಮೊದಲ ಜಯ ಎಂದು ಫೋರಂ ಅಧ್ಯಕ್ಷ ಬಿ ಸಮೀವುಲ್ಲಾ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಕರ್ನಾಟಕ ಡಿಜಿಟಲ್ ಮೀಡಿಯಾ ಫೋರಂ ( KSDMF ) ಶೀಘ್ರವೇ ಮುಂದಿನ ಕಾರ್ಯತಂತ್ರದ ಕುರಿತು ಸಭೆ ಸೇರಿ ನಿರ್ಧಾರ ಮಾಡುವುದಾಗಿ ಅಧ್ಯಕ್ಷರಾದ ಬಿ ಸಮೀವುಲ್ಲಾ ತಿಳಿಸಿದ್ದಾರೆ. ಇದೇ ವೇಳೆ KSDMF ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಸಗರಹಳ್ಳಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಜೊತೆಗೆ ಡಿಜಿಟಲ್ ಮಾಧ್ಯಮಗಳಿಗೆ ಮತ್ತಷ್ಟು ಶಕ್ತಿ ತುಂಬಲು ಪ್ರಯತ್ನಿಸುವುದಾಗಿ ತಿಳಿಸಿದ್ರು. ಅಲ್ಲದೇ ಡಿಜಿಟಲ್ ಮಾಧ್ಯಮಗಳ ನ್ಯೂನತೆಗಳ ಸರಿಪಡಿಸುವ ಕಡೆ ಗಮನ ಹರಿಸುವುದಾಗಿ ತಿಳಿಸಿದ್ರು.
ಡಿಜಿಟಲ್ ಮಾಧ್ಯಮ ಸಂಸ್ಥೆಗಳಿಂದ KSDMFಗೆ ಅಭಿನಂದನೆ
ಇನ್ನು ಡಿಜಿಟಲ್ ಮಾಧ್ಯಮಗಳ ಮಾನ್ಯತೆ ಹಾಗೂ ಜಾಹೀರಾತು ನೀತಿ ಕುರಿತು ಸಾಕಷ್ಟು ಶ್ರಮವಹಿಸಿದ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ಅಧ್ಯಕ್ಷರಾದ ಬಿ ಸಮೀವುಲ್ಲಾ ಹಾಗೂ ಫೋರಂ ಕಾರ್ಯಕಾರಿ ಸಮಿತಿ ಸದಸ್ಯರು ಜೊತೆಗೆ ಫೋರಂ ಸದಸ್ಯರಿಗೆ ಧನ್ಯವಾದ ತಿಳಿಸಿದ್ದಾರೆ. ಡಿಜಿಟಲ್ ಮಾಧ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ KSDMF ಸಂಘಟನಾತ್ಮಕ ಹೋರಾಟದ ಫಲವಾಗಿ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ ಜಾರಿಯಾಗ್ತಿರೊದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ನಮ್ಮ ಕರ್ನಾಟಕ ಟಿವಿ ಕೂಡ KSDMF ( ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ) ಸದಸ್ಯ ಡಿಜಿಟಲ್ ಮೀಡಿಯಾ ಸಂಸ್ಥೆಯಾಗಿರೋದು ಸಂತಸದ ವಿಚಾರ.
ಸೂಚನೆ : ಡಿಜಿಟಲ್ ನಡೆಸುತ್ತಿದ್ದು KSDMF ಸದಸ್ಯರಾಗಲು ಇಚ್ಚೆ ಉಳ್ಳವರು ಫೋರಂ ಸದಸ್ಯರನ್ನ ಸಂಪರ್ಕಿಸಿ. ಮಾನದಂಡದ ಆಧಾರದ ಮೇಲೆ ಸದಸ್ಯತ್ವ ಕೊಡಲಾಗುವುದು.