Sunday, March 3, 2024

Latest Posts

ರಾಜ್ಯದಲ್ಲಿ ನೆರೆಯಿಂದ ನಷ್ಟವಾಗಿದ್ದು ಇಷ್ಟೇನಾ..? ಸಚಿವರು ಹೇಳಿದ್ದೇನು..?

- Advertisement -

ರಾಜ್ಯದಲ್ಲಿ ತೀವ್ರ ನೆರೆಯಿಂದ ಸಾವಿರಾರು ಜನ ಮನೆಮಠ  ಕಳೆದುಕಂಡಿದ್ದಾರೆ.. ಕೃಷ್ಣೆಯಿಂದ ಕಾವೇರಿವರೆಗೆ ಮಳೆಯ ಆರ್ಭಟಕ್ಕೆ ರಾಜ್ಯ ನಲುಗಿ ಹೋಗಿದೆ.. ಸಾವಿರಾರು ಕಿಲೋಮೀಟರ್ ರಸ್ತೆ, ಹಾಳಾಗಿದ್ರೆ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.. ಲಕ್ಷಕೋಟಿ ಸಮೀಪ ಆಸ್ತಿ-ಪಾಸ್ತಿ ಜೀವ ಹಾನಿಯಾಗಿದೆ.. ಆದ್ರೆ, ರಾಜ್ಯ ಸರ್ಕಾರ 32 ಸಾವಿರ ಕೋಟಿ ನಷ್ಟವಾಗಿದೆ ಎಂದ ವರದಿ ರೆಡಿ ಮಾಡಿಟ್ಟುಕೊಂಡಿದೆ.

ಮೋದಿಗೆ ವರದಿ ಕೊಡಲು ರಾಜ್ಯ ಸರ್ಕಾರ ರೆಡಿ

ಇನ್ನು ಪ್ರವಾಹ ಸಂತ್ರಸ್ತರಿಗೆ ನೆರವು ಕೊಡಲು ಸರ್ಕಾರದ ವತಿಯಿಂದ ಕಮಿಟಿ ಮಾಡಿ ಚರ್ಚೆ ಮಾಡಿ ಎರದು ದಿನಗಳಾಗಿದೆ. ಸಂತ್ರಸ್ತರಿಗೆ ತುರ್ತು ನೆರವು ಕೊಟ್ಟಿದ್ದೇವೆ. 32 ಸಾವಿರ ಕೋಟಿ ನಷ್ಟವಾಗಿದೆ ಎಂದು ವರದಿ ತಯಾರು ಮಾಡಿದ್ದೇವೆ. ಮೋದಿ ಬೆಂಗಳೂರಿಗೆ ಬಂದಾಗ ಪರಿಹಾರಕ್ಕೆ ಮನವಿ ಮಾಡ್ತೇವೆ ಅಂತ ಸಚಿವ ಮಾಧುಸ್ವಾಮಿ ಮಂಡ್ಯದಲ್ಲಿ ಹೇಳಿಕೆ ನೀಡಿದ್ರು..

ನೆರೆಯಿಂದ 50 ಸಾವಿರ ಕೋಟಿಗೂ ಅಧಿಕ ಮೊತ್ತದ ನಷ್ಟವಾಗಿದೆ. ಆದ್ರೆ ರಾಜ್ಯ ಸರ್ಕಾರ 32 ಸಾವಿರ ಕೋಟಿ ನಷ್ಟದ ವರದಿ ನೀಡಿದ್ರೆ ಕೇಂದ್ರ ಸರ್ಕಾರ ತಾನು ಕಳುಹಿಸಿದ್ದ ಕೇಂದ್ರ ತಂಡದ ವರದಿಯಾಧರಿಸಿ ತಾಳೆಯಾಕಿ ಹೆಚ್ಚು ಅಂದ್ರೆ 5-6 ಸಾವಿರ ಕೋಟಿ ನೆರವು ಕೊಡಬಹುದು.. ರಾಜ್ಯ ಸರ್ಕಾರ ಈಗ ಕೊಟ್ಟಿರುವ ವರದಿಯ್ನ ಆಧರಿಸಿ ನೆರವು ಕೋರಿದ್ರೆ ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ನ್ಯಾಯ ದಗಿಸುವುದು ಅಸಾಧ್ಯದ ಮಾತು.

- Advertisement -

Latest Posts

Don't Miss