Wednesday, November 13, 2024

Latest Posts

ಪ್ರಾಸಿಕ್ಯೂಷನ್​ ಅನುಮತಿಯಲ್ಲಿರುವ ಸೆಕ್ಷನ್​ಗಳು ಯಾವುವು?

- Advertisement -

ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದಾರೆ. ಪ್ರಾಸಿಕ್ಯೂಷನ್​ನಲ್ಲಿ ಸೆಕ್ಷನ್​​ 7, 9, 11, 12 ಹಾಗೂ 15ನ್ನು ಉಲ್ಲೇಖ ಮಾಡಲಾಗಿದೆ. ಹಾಗಾದ್ರೆ, ಯಾವ್ಯಾವ ಸೆಕ್ಷನ್ ಏನು ಹೇಳುತ್ತೆ ಅನ್ನೋದ್ರ ಮಾಹಿತಿ ಇಲ್ಲಿದೆ.

ಪ್ರಾಸಿಕ್ಯೂಷನ್​ನಲ್ಲಿ ಭಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 7ನ್ನು ಉಲ್ಲೇಖ ಮಾಡಲಾಗಿದ್ದು, ಇದು ಅಧಿಕಾರ ದುರ್ಬಳಕೆಯಾಗಿದೆ. ಸೆಕ್ಷನ್ 9- ವಾಣಿಜ್ಯ ಸಂಸ್ಥೆಗೆ ಅನುಚಿತ ಅನುಕೂಲ, ಸೆಕ್ಷನ್ 11- ಸರ್ಕಾರ ಸೇವಕ ತನ್ನ ಕಾರ್ಯಕ್ಕೆ ಅನುಚಿತ ಲಾಭ, ಸೆಕ್ಷನ್ 12- ಯಾವುದೇ ಅಪರಾಧಕ್ಕೆ ಪ್ರಚೋದನೆ ನೀಡುವುದು ಹಾಗೂ ಸೆಕ್ಷನ್ 15- ತಮ್ಮ ಅಧಿಕಾರ ವ್ಯಾಪ್ತಿ ದುರ್ಬಳಕೆ ಆರೋಪ ಸೂಚಿಸುತ್ತದೆ.


ಇನ್ನೂ, ರಾಜ್ಯಪಾಲ ಗೆಹ್ಲೋಟ್ ಸೂಚನೆ ಮೆರೆಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಿಂ ರಾಜ್ಯಭವನಕ್ಕೆ ಆಗಮಿಸಿದ್ದಾರೆ. 3 ಗಂಟೆಗೆ ಆಗಮಿಸುವಂತೆ ರಾಜ್ಯಪಾಲರು ಸೂಚನೆ ನೀಡಿದ್ರು. ಅದರಂತೆ ಅಬ್ರಾಹಿಂ ಅವರು ಮತ್ತಷ್ಟು ದಾಖಲೆಗಳೊಂದಿಗೆ ರಾಜ್ಯಭವನಕ್ಕೆ ಆಗಮಿಸಿದ್ದಾರೆ.

- Advertisement -

Latest Posts

Don't Miss