Friday, October 17, 2025

Latest Posts

ಡಿಸೋಜಾಗೆ ಪಾಕ್ ಉಗ್ರರ ನಂಟು ಇದೇಯಾ?- ಕಾರಜೋಳ ಕಿಡಿ

- Advertisement -

ಶೇಖ್ ಹಸೀನಾ ಅವರಿಗೆ ಬಂದ ಗತಿ ರಾಜ್ಯಪಾಲರಾದ ಗೆಹ್ಲೋಟ್​ಗೆ ಬರುತ್ತೆ ಎಂದಿದ್ದ ಎಂಎಲ್​ಸಿ ಐವಾನ್ ಡಿಸೋಜಾ ವಿರುದ್ಧ ಬಿಜೆಪಿ ಸಂಸದ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.

ರಾಜ್ಯಪಾಲರಿಗೆ ಅಪಮಾನ ಮಾಡಿರೋ ಡಿಸೋಜಾ ಅವರನ್ನು ಎಂಎಲ್​ಸಿ ಸ್ಥಾನದಿಂದ ವಜಾಗೊಳಿಸಬೇಕು. ಎಲ್ಲಾ ಕಾಂಗ್ರೆಸ್ಸಿಗರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಕಾರಜೋಳ ಆಗ್ರಹಿಸಿದ್ರು. ಪ್ರತಿಭಟನೆ ನಡೆಸುವ ವೇಳೆ ರಾಜ್ಯಪಾಲರ ಫೋಟೋಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಅವಾಚ್ಯ ಶಬ್ದರಿಂದ ನಿಂದನೆ ಮಾಡಿದ್ದಾರೆ. ಐವಾನ್ ಡಿಸೋಜಾಗೆ ಪಾಕ್ ಉಗ್ರರ ನಂಟು ಇದೇಯಾ? ಎಂದು ಪ್ರಶ್ನಿಸಿದ್ರು.

ಸಿಎಂ ಸಿದ್ದರಾಮಯ್ಯ ಅವರು ಆರೋಪ ಮುಕ್ತರಾಗಿ ಹೊರಬರಬೇಕು. ಆರೋಪ ಬಂದಾಗ ಅಪರಾಧಿ ಎಂದು ಹೇಳಲ್ಲ. ಸಿಎಂ ನಿರಪರಾಧಿ ಎಂದು ಸಾಬೀತು ಪಡಿಸಲಿ ಎಂದು ಸವಾಲ್ ಹಾಕಿದ್ರು.ಪರಿಷತ್​ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಿಎಂ ನಿರಪರಾಧಿ ಎಂದು ಸಾಬೀತು ಪಡಿಸುವ ಬದಲು ಹಿಂದುಳಿದವರು ಎಂಬ ರಕ್ಷಣಾ ಕವಚದಡಿ ಆಶ್ರಯಪಡೆಯುತ್ತಿದ್ದಾರೆ ಎಂದು ಟೀಕಿಸಿದ್ರು.

- Advertisement -

Latest Posts

Don't Miss