ರಾಜ್ಯದಲ್ಲಿ ಹಲವೆಡೆ ಬರಗಾಲ ಇದೆ. ಜನಸಾಮಾನ್ಯರು ಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲೂ ಬಿಯರ್ ಮಾರಟ ದಾಖಲೆ ಸೃಷ್ಟಿಮಾಡಿದೆ. ಏಪ್ರಿಲ್ ತಿಂಗಳಲ್ಲಿ ಅಬಕಾರಿ ಇಲಾಖೆಯ ಇತಿಹಾಸದಲ್ಲೆ ದಾಖಲೆ ಪ್ರಮಾಣದ ಬಿಯರ್ ಮಾರಾಟ ಹೆಚ್ಚಾಗಿತ್ತು. ಆದರೆ ಮೇ ತಿಂಗಳಲ್ಲೀ ಈ ಸಾರ್ವಕಾಲಿಕ ದಾಖಲೆಯು ಬ್ರೇಕ್ ಆಗಿದೆ.
ಹೌದು.. ರಾಜ್ಯದಲ್ಲಿ ಬಿಯಲ್ ಮಾರಾಟದಿಂದಾಗಿ ಅಬಕಾರಿ ಇಲಾಖೆ ಭಾರೀ ಲಾಭದಲ್ಲಿದೆ. 2024ರ ಏಪ್ರಿಲ್ ತಿಂಗಳಲ್ಲಿ 48.72 ಲಕ್ಷ ಬಾಕ್ಸ್ ಬಿಯರ್ ಅಂದರೆ, 3.80 ಕೋಟಿ ಲೀ. ಬಿಯರ್ ಮಾರಾಟವಾಗಿತ್ತು. ಅಬಕಾರಿ ಇಲಾಖೆಯ ಇತಿಹಾಸದಲ್ಲೇ ಒಂದು ತಿಂಗಳಲ್ಲಿ ಇಷ್ಟೊಂದು ಭಾರೀ ಪ್ರಮಾಣದಲ್ಲಿ ಬಿಯರ್ ಮಾರಾಟವಾಗಿರಲಿಲ್ಲಾ. ಆದ್ದರಿಂದ ಇದು ಸಾರ್ವತ್ರಿಕ ದಾಖಲೆಯಾಗಿತ್ತು. ಆದರೆ ಮೇ ತಿಂಗಳಿನಲ್ಲೂ ಬರೋಬ್ಬರಿ 50.71 ಲಕ್ಷ ಬಾಕ್ಸ್, ಅಂದರೆ 3.95 ಕೋಟಿ ಲೀ. ಬಿಯರ್ ಮಾರಾಟವಾಗಿ ಹಿಂದಿನ ತಿಂಗಳ ದಾಖಲೆ ಮುರಿದಿದೆ.
2023ರ ಏಪ್ರಿಲ್-ಮೇ ತಿಂಗಳಲ್ಲಿ ಒಟ್ಟಾರೆ 115.25 ಲಕ್ಷ ಬಾಕ್ಸ್ ಐಎಂಎಲ್ ಮದ್ಯ, 76.88 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದು ಅಬಕಾರಿ ಇಲಾಖೆಯು 4915.59 ಕೋಟಿ ರು. ರಾಜಸ್ವ ಸಂಗ್ರಹಿಸಿತ್ತು. 2024ರ ಏಪ್ರಿಲ್-ಮೇ ನಲ್ಲಿ 118.27 ಲಕ್ಷ ಬಾಕ್ಸ್ ಐಎಂಎಲ್ ಮದ್ಯ, 100.43 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿ 5449.80 ಕೋಟಿ ರು. ರಾಜಸ್ವ ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವದಿಗೆ ಹೋಲಿಸಿದರೆ 534.2 ಕೋಟಿ ರೂಪಾಯಿಗೂ ಅಧಿಕ ರಾಜಸ್ವ ಸಂಗ್ರಹವಾಗಿದ್ದು ಬಿಯರ್ ಮಾರಾಟದಲ್ಲಿ ಶೇ.30.63 ಬೆಳವಣಿಗೆಯಾಗಿದೆ.
ಬಿಯರ್ ಮಾತ್ರವಲ್ಲ ಐಎಂಎಲ್ ಮದ್ಯ ಮಾರಾಟವೂ ಕಳೆದ ಏಪ್ರಿಲ್ – ಮೇ ತಿಂಗಳೀಗೆ ಹೋಲಿಸಿದರೆ ಪ್ರಸ್ತುತ ಸಾಲಿನಲ್ಲಿ ಹೆಚ್ಚಳವಾಗಿದೆ. 2023 ಏಪ್ರಿಲ್‍ನಲ್ಲಿ 52.90 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿದ್ರೆ, 2024 ಏಪ್ರಿಲ್‍ನಲ್ಲಿ 54.46 ಲಕ್ಷ ಬಾಕ್ಸ್ ಮಾರಾಟವಾಗಿದೆ. 2023 ಮೇ ತಿಂಗಳಲ್ಲಿ 22.35 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿದ್ದರೆ, 2024 ಮೇ ಮಾಹೆಯಲ್ಲಿ 63.81 ಲಕ್ಷ ಬಾಕ್ಸ್ ಮಾರಾಟವಾಗಿದೆ. ರಾಜ್ಯದಲ್ಲಿ ಬಿಸಿಲಿನತಾಪ ಹೆಚ್ಚಾಗಿರೋದು ಮೇ ತಿಂಗಳಿನಲ್ಲಿ ಬಿಯರ್ ಮಾರಾಟ ಅಧಿಕವಾಗಲು ಕಾರಣವಾಗಿದೆ. ಲೋಕಸಭೆ ಚುನಾವಣೆ ನಡೆದಿದ್ದು, ಬಿಯರ್ ಮಾರಾಟ ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
Liquor: ಮೇನಲ್ಲೂ ದಾಖಲೆಯ ಬಿಯರ್ ಮಾರಾಟ !
- Advertisement -
- Advertisement -