- Advertisement -
www.karnatakatv.net:ರಾಜ್ಯ:ಬೆಂಗಳೂರು- ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಆರಂಭದ ಕುರಿತು ಸೋಮವಾರ ತಜ್ಞರ ಸಭೆ ಕರೆಯಲಾಗಿದೆ. ಆ ನಂತರ ಶಾಲೆಗಳ ಆರಂಭದ ಕುರಿತು ತೀರ್ಮಾನಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಬೆಂಗೂಳಿರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಸೋಮವಾರ ತಜ್ಞರ ಸಭೆ ಕರೆಯಲಾಗಿದೆ.ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇವೆ,ಸದ್ಯ ವಿದ್ಯಾಗಮದ ಮೂಲಕ ಶಾಲಾ-ಚಟುವಟಿಕೆ ನಡೆಯುತ್ತಿದೆ ಎಂದ್ರು. ಇನ್ನು, ಶಾಲಾ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಇದು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.ನ್ಯಾಯಾಲಯದ ತೀರ್ಪಿನ ನಂತರ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದ್ರು.
- Advertisement -