- Advertisement -
ಕರ್ನಾಟಕ ಟಿವಿ : ಮದ್ಯಮಾರಾಟಕ್ಕೆ ಅವಕಾಶ ಸಿಕ್ಕ ಹಿನ್ನೆಲೆ ಮದ್ಯಪ್ರಿಯರು ಫುಲ್ ಖುಷಿಯಾಗಿ ಒಂದೈದು ಬಾಟಲೆ ಎಕ್ಟ್ರಾ ತೆಗೆದುಕೊಂಡು ಕುಡಿದು ಕೆಲವನ್ನ ಸ್ಟಾಕ್ ಇಟ್ಟಕೊಂಡಿದ್ದಾರೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ 52 ಸಾವಿರಕ್ಕೆ ಮಧ್ಯ ಖರೀದಿ ಮಾಡಿರೋದು ಫುಲ್ ವೈರಲ್ ಆಗಿದೆ. ಬೆಂಗಳೂರಿನ ತಾವರೆಕೆರೆಯ ವೆನಿಲ್ಲಾ ಸ್ಪಿರಿಟ್ ಝೋನ್ ನಿಂದ ಇಷ್ಟು ಮದ್ಯವನ್ನ ಒಬ್ಬನೇ ವ್ಯಕ್ತಿ ಖರೀದಿ ಮಾಡಿರೋದು ತಿಳಿದುಬಂದಿದೆ. ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಸಖತ್ ಆದಾಯ ಬರ್ತಿದೆ ಆದ್ರೆ, ಕುಡಿದ ಮೇಲೆ ಸೋಷಿಯಲ್ ಡಿಸ್ಟೆನ್ಸಿಂಗ್ ಅನ್ನೋದು ಮಾಯವಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ.
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ, ಬೆಂಗಳೂರು
- Advertisement -