Political News:
ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈಗಾಗ್ಲೇ ಎಲ್ಲಾ ಪಕ್ಷಗಳು ಬೇರೆ ಬೇರೆ ಹೆಸರಲ್ಲಿ ಯಾತ್ರೆ, ಸಮಾವೇಶ, ಸಮಾರಂಭ, ಕಾರ್ಯಕ್ರಮಗಳನ್ನ ಶುರು ಮಾಡಿವೆ. ಮಾರ್ಚ್ ಕೊನೇ ವೇಳೆಗೆ ಚುನಾವಣೆ ಘೋಷಣೆಯೂ ಆಗಿರುತ್ತೆ. ಹೀಗಾಗಿ ಯಾವ ಪಕ್ಷಕ್ಕೆ ಬಹುಮತ ಬರುತ್ತೆ.? ಯಾವ ಪಕ್ಷಕ್ಕೆ ಎಷ್ಟು ಸೀಟು ಬರುತ್ತೆ.? ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಅನ್ನೋ ಕುತೂಹಲ ಇಡೀ ರಾಜ್ಯಾದ್ಯಂತ ಮನೆ ಮಾಡಿದೆ. ಈ ನಡುವೆ, ಕರ್ನಾಟಕದ ನಂಬರ್ 01 ಡಿಜಿಟಲ್ ಮೀಡಿಯಾ, ಕರ್ನಾಟಕ ಟಿವಿ ಡಿಜಿಟಲ್ ಮಾಧ್ಯಮ ಕಳೆದ 4 ತಿಂಗಳಿನಿಂದ ಪ್ರತಿ ತಿಂಗಳು ಎಲ್ಲಾ 224 ಕ್ಷೇತ್ರಗಳ ಟ್ರೆಂಡ್ ನೀಡ್ತಿದೆ. ಅದರಂತೆ ಫೆಬ್ರವರಿಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು.? ಯಾವ ಜಿಲ್ಲೆಯಲ್ಲಿ ಯಾರ ಪ್ರಾಬಲ್ಯ ಹೇಗಿದೆ.? ಕ್ಷೇತ್ರವಾರು ಟ್ರೆಂಡ್ ಏನು ಅನ್ನೋ ಸಮೀಕ್ಷೆಯನ್ನ ಪ್ರಸಾರ ಮಾಡಿದೆ. ಕರ್ನಾಟಕ ಟಿವಿಯ ಫೆಬ್ರವರಿ ಸರ್ವೆಯ ಟ್ರೆಂಡ್ ನೋಡೋದಾದ್ರೆ..
ಬೆಂಗಳೂರು ನಗರದ 28 ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್
ಕರ್ನಾಟಕದ 224 ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಕ್ಷೇತ್ರಗಳಿರೋ ಜಿಲ್ಲೆ ಬೆಂಗಳೂರು ನಗರ. ಒಟ್ಟು 28 ಕ್ಷೇತ್ರಗಳು. 28 ಕ್ಷೇತ್ರಗಳಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಈಗಾಗ್ಲೇ ಶಾಸಕರು, ಮಂತ್ರಿಗಳು ಆಗಿರುವವರೇ ಸ್ಪರ್ಧೆ ಮಾಡ್ತಾರೆ. ಅವರೇ ಗೆಲ್ತಾರೆ ಅನ್ನೋ ಲೆಕ್ಕಾಚಾರ ಇದೆ. ರಾಮಲಿಂಗಾ ರೆಡ್ಡಿ, ಕೆ ಜೆ. ಜಾರ್ಜ್, ಗೋಪಾಲಯ್ಯ, ಮುನಿರತ್ನ, ಭೈರತಿ ಬಸವರಾಜ್, ರವಿ ಸುಬ್ರಮಣ್ಯ, ಎಂ ಕೃಷ್ಣಪ್ಪ, ಕೃಷ್ಣ ಭೈರೇಗೌಡ, ಅಖಂಡ ಶ್ರೀನಿವಾಸ ಪೂರ್ತಿ, ಆರ್. ಅಶೋಕ್, ಅರವಿಂದ ಲಿಂಬಾವಲಿ ಹೀಗೆ ಸಾಕಷ್ಟು ಹೆಸರುಗಳು ಕೇಳಿ ಬರ್ತಿವೆ.
ಆದ್ರೆ, ಈ ಬಾರಿ ಕೆಲವೊಂದಿಷ್ಟು ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕುತ್ತೆ ಎನ್ನಲಾಗ್ತಿದೆ. ಬೆಂಗಳೂರಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ತಯಾರಿ ನಡೆಸಿದೆ. ಫಿಕ್ಸಿಂಗ್ ಬೇಡ, ಓನ್ಲೀ ಫೈನಿಂಗ್ ಅನ್ನೋ ಮಂತ್ರಕ್ಕೆ ಸೈ ಎಂದಿರೋ ಬಿಜೆಪಿ ರಣತಂತ್ರ ರೂಪಿಸ್ತಿದೆ.
ಸದ್ಯ ಬೆಂಗಳೂರು ನಗರದ 28 ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು ಅನ್ನೋ ಕುತೂಹಲಕ್ಕೆ ಕರ್ನಾಟಕ ಟಿವಿ ಫೆಬ್ರವರಿ ಸಮೀಕ್ಷೆಯಲ್ಲಿ ಸಿಕ್ಕ ಉತ್ತರ ಏನಂದ್ರೆ, 28 ಕ್ಷೇತ್ರಗಳಲ್ಲಿ ಬಿಜೆಪಿ 16, ಕಾಂಗ್ರೆಸ್ 10, ಜೆಡಿಎಸ್ 2 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಬೆಂಗಳೂರು 28 ಕ್ಷೇತ್ರ ಯಾರಿಗೆ ಎಷ್ಟು.?
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್
ಬಿಜೆಪಿ – 16
ಕಾಂಗ್ರೆಸ್ – 10
ಜೆಡಿಎಸ್ – 2
ಬೆಂಗಳೂರು ನಗರ ಯಾವ ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಮುನ್ನಡೆ.?
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್
ಯಲಹಂಕ : ಬಿಜೆಪಿ ಮುನ್ನಡೆ
ಕೆ.ಆರ್.ಪುರಂಟ : ಬಿಜೆಪಿ ಮುನ್ನಡೆ
ಬ್ಯಾಟರಾಯನಪುರ : ಕಾಂಗ್ರೆಸ್ ಮುನ್ನಡೆ
ಯಶವಂತಪುರ : ಜೆಡಿಎಸ್ ಮುನ್ನಡೆ
ಆರ್.ಆರ್. ನಗರ : ಬಿಜೆಪಿ ಮುನ್ನಡೆ
ದಾಸರಹಳ್ಳಿ : ಜೆಡಿಎಸ್ ಮುನ್ನಡೆ
ಮಹಾಲಕ್ಷ್ಮೀ ಲೇಔಟ್ : ಬಿಜೆಪಿ ಮುನ್ನಡೆ
ಮಲ್ಲೇಶ್ವರಂ : ಬಿಜೆಪಿ ಮುನ್ನಡೆ
ಹೆಬ್ಬಾಳ : ಬಿಜೆಪಿ ಮುನ್ನಡೆ
ಪುಲಿಕೇಶಿನಗರ : ಕಾಂಗ್ರೆಸ್ ಮುನ್ನಡೆ
ಸರ್ವಜ್ಞ ನಗರ : ಕಾಂಗ್ರೆಸ್ ಮುನ್ನಡೆ
ಸಿವಿ ರಾಮನ್ ನಗರ : ಬಿಜೆಪಿ ಮುನ್ನಡೆ
ಶಿವಾಜಿನಗರ : ಕಾಂಗ್ರೆಸ್ ಮುನ್ನಡೆ
ಶಾಂತಿನಗರ : ಕಾಂಗ್ರೆಸ್ ಮುನ್ನಡೆ
ಗಾಂಧಿನಗರ : ಕಾಂಗ್ರೆಸ್ ಮುನ್ನಡೆ
ರಾಜಾಜಿನಗರ : ಬಿಜೆಪಿ ಮುನ್ನಡೆ
ಗೋವಿಂದರಾಜನಗರ : ಕಾಂಗ್ರೆಸ್ ಮುನ್ನಡೆ
ವಿಜಯನಗರ : ಕಾಂಗ್ರೆಸ್ ಮುನ್ನಡೆ
ಚಾಮರಾಜಪೇಟೆ : ಕಾಂಗ್ರೆಸ್ ಮುನ್ನಡೆ
ಚಿಕ್ಕಪೇಟೆ : ಬಿಜೆಪಿ ಮುನ್ನಡೆ
ಬಸವನಗುಡಿ : ಬಿಜೆಪಿ ಮುನ್ನಡೆ
ಪದ್ಮನಾಭನಗರ : ಬಿಜೆಪಿ ಮುನ್ನಡೆ
ಬಿಟಿಎಂ ಲೇಔಟ್ : ಕಾಂಗ್ರೆಸ್ ಮುನ್ನಡೆ
ಜಯನಗರ : ಬಿಜೆಪಿ ಮುನ್ನಡೆ
ಮಹದೇವಪುರ : ಬಿಜೆಪಿ ಮುನ್ನಡೆ
ಬೊಮ್ಮನಹಳ್ಳಿ : ಬಿಜೆಪಿ ಮುನ್ನಡೆ
ಬೆಂಗಳೂರು ಸೌತ್ : ಬಿಜೆಪಿ ಮುನ್ನಡೆ
ಆನೇಕಲ್ : ಬಿಜೆಪಿ ಮುನ್ನಡೆ
ಇದು ಫೆಬ್ರವರಿ ಟ್ರೆಂಡ್ ಮಾತ್ರ ಅಷ್ಟೇ. ಇನ್ನೂ ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಪ್ರಕಟವಾದ ಬಳಿಕ ಜೊತೆಗೆ ಚುನಾವಣೆ ಘೋಷಣೆಯಾದ ಬಳಿಕ ಟ್ರೆಂಡ್ನಲ್ಲಿ ಸಾಕಷ್ಟು ಬದಲಾವಣೆ ಆಗೋ ಸಾಧ್ಯತೆ ಇದೆ. ನೀವೂ ಕೂಡ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ನಲ್ಲಿ ತಿಳಿಸಬಹುದು. ನಿಮ್ಮ ಕ್ಷೇತ್ರ ಯಾವುದು.? ನಿಮ್ಮ ಕ್ಷೇತ್ರದಲ್ಲಿ ಯಾರ್ ಆಗ್ತಾರೆ ಶಾಸಕರು.? ಕಾಮೆಂಟ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ.
ಪೊಲಿಟಿಕಲ್ ಬ್ಯುರೋ, ಕರ್ನಾಟಕ ಟಿವಿ.
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಕೊಪ್ಪಳದ 5 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.? ರೆಡ್ಡಿ ಕಥೆ ಏನು.?
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ರಾಯಚೂರು 7 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಯಾದಗಿರಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಕಿತ್ತೂರು ಕರ್ನಾಟಕದ 50 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಹಾವೇರಿ 6 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಹುಬ್ಬಳ್ಳಿ-ಧಾರವಾಡ 7 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?