Political news:
Feb:26:ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈಗಾಗ್ಲೇ ಎಲ್ಲಾ ಪಕ್ಷಗಳು ಬೇರೆ ಬೇರೆ ಹೆಸರಲ್ಲಿ ಯಾತ್ರೆ, ಸಮಾವೇಶ, ಸಮಾರಂಭ, ಕಾರ್ಯಕ್ರಮಗಳನ್ನ ಶುರು ಮಾಡಿವೆ. ಮಾರ್ಚ್ ಕೊನೇ ವೇಳೆಗೆ ಚುನಾವಣೆ ಘೋಷಣೆಯೂ ಆಗಿರುತ್ತೆ. ಹೀಗಾಗಿ ಯಾವ ಪಕ್ಷಕ್ಕೆ ಬಹುಮತ ಬರುತ್ತೆ.? ಯಾವ ಪಕ್ಷಕ್ಕೆ ಎಷ್ಟು ಸೀಟು ಬರುತ್ತೆ.? ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಅನ್ನೋ ಕುತೂಹಲ ಇಡೀ ರಾಜ್ಯಾದ್ಯಂತ ಮನೆ ಮಾಡಿದೆ. ಈ ನಡುವೆ, ಕರ್ನಾಟಕ ಟಿವಿ ಡಿಜಿಟಲ್ ಮಾಧ್ಯಮ ಕಳೆದ 4 ತಿಂಗಳಿನಿಂದ ಪ್ರತಿ ತಿಂಗಳು ಎಲ್ಲಾ 224 ಕ್ಷೇತ್ರಗಳ ಟ್ರೆಂಡ್ ನೀಡ್ತಿದೆ. ಅದರಂತೆ ಫೆಬ್ರವರಿಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು.? ಯಾವ ಜಿಲ್ಲೆಯಲ್ಲಿ ಯಾರ ಪ್ರಾಬಲ್ಯ ಹೇಗಿದೆ.? ಕ್ಷೇತ್ರವಾರು ಟ್ರೆಂಡ್ ಏನು ಅನ್ನೋ ಸಮೀಕ್ಷೆಯನ್ನ ಪ್ರಸಾರ ಮಾಡಿದೆ.
ಗದಗ 4 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್
ಘಟಾನುಘಟಿ ನಾಯಕರಾದ ಹೆಚ್.ಕೆ. ಪಾಟೀಲ್, ಕಳಕಪ್ಪ ಬಂಡಿ, ಸಿಸಿ ಪಾಟೀಲ್ ಸ್ಪರ್ಧಿಸುವ ಜಿಲ್ಲೆ ಗದಗ. ಗದಗ ಜಿಲ್ಲೆಯಲ್ಲಿ ಒಟ್ಟು 4 ವಿಧಾನಸಭಾ ಕ್ಷೇತ್ರಗಳಿವೆ. ತೀವ್ರ ಹಣಾಹಣೆಯಿಂದ ಕೂಡಿರೋ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ವರ್ಸಸ್ ಬಿಜೆಪಿ ಫೈಟ್. ರೋಣ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ ಈ ಬಾರಿ ಮ್ಯಾಜಿಕ್ ಮಾಡ್ತಾರಾ ಅನ್ನೋ ಕುತೂಹಲ, ನಿರೀಕ್ಷೆ ಹೆಚ್ಚಾಗಿದೆ. ಗದಗ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು ಅನ್ನೋ ಕುತೂಹಲಕ್ಕೆ ಕರ್ನಾಟಕ ಟಿವಿ ಫೆಬ್ರವರಿ ಸಮೀಕ್ಷೆಯಲ್ಲಿ ಸಿಕ್ಕ ಉತ್ತರ ಏನಂದ್ರೆ, 4 ಕ್ಷೇತ್ರಗಳಲ್ಲಿ ಬಿಜೆಪಿ 2 ರಲ್ಲಿ ಮುನ್ನಡೆ ಸಾಧಿಸಿದ್ರೆ, ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದ್ರೆ, ರೋಣದಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಪೈಪೋಟಿಯ ಮಧ್ಯೆ ಎಎಪಿಯಿಂದ ಆನೇಕಲ್ ದೊಡ್ಡಯ್ಯ ತೀವ್ರ ಸ್ಪರ್ಧೆ ನೀಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಎಪಿ ಮುನ್ನಡೆ ಸಾಧಿಸಿದ್ರೂ ಅಚ್ಚರಿ ಪಡಬೇಕಿಲ್ಲ.
ಗದಗ ಜಿಲ್ಲೆ 4 ಕ್ಷೇತ್ರ
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್
ಬಿಜೆಪಿ – 2
ಕಾಂಗ್ರೆಸ್ – 2
ಗದಗ ಯಾವ ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಮುನ್ನಡೆ.?
ಕರ್ನಾಟಕ ಟಿವಿ ಫೆಬ್ರವರಿ ಟ್ರೆಂಡ್
ಶಿರಹಟ್ಟಿ – ಬಿಜೆಪಿ ಮುನ್ನಡೆ
ಗದಗ – ಕಾಂಗ್ರೆಸ್ ಮುನ್ನಡೆ
ರೋಣ – ಕಾಂಗ್ರೆಸ್ ಮುನ್ನಡೆ
ನರಗುಂದ – ಬಿಜೆಪಿ ಮುನ್ನಡೆ
ಇದು ಫೆಬ್ರವರಿ ಟ್ರೆಂಡ್ ಮಾತ್ರ ಅಷ್ಟೇ. ಇನ್ನೂ ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಪ್ರಕಟವಾದ ಬಳಿಕ ಜೊತೆಗೆ ಚುನಾವಣೆ ಘೋಷಣೆಯಾದ ಬಳಿಕ ಟ್ರೆಂಡ್ನಲ್ಲಿ ಸಾಕಷ್ಟು ಬದಲಾವಣೆ ಆಗೋ ಸಾಧ್ಯತೆ ಇದೆ. ನೀವೂ ಕೂಡ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ನಲ್ಲಿ ತಿಳಿಸಬಹುದು. ನಿಮ್ಮ ಕ್ಷೇತ್ರ ಯಾವುದು.? ನಿಮ್ಮ ಕ್ಷೇತ್ರದಲ್ಲಿ ಯಾರ್ ಆಗ್ತಾರೆ ಶಾಸಕರು.? ಕಾಮೆಂಟ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ.
ಪೊಲಿಟಿಕಲ್ ಬ್ಯುರೋ, ಕರ್ನಾಟಕ ಟಿವಿ.
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಬಾಗಲಕೋಟೆ 7 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?
ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಬೆಳಗಾವಿಯ 18 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?
‘ಕೈ’ ತೊರೆದು ‘ಕಮಲ’ ಹಿಡಿದ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ : ಸಂಚಲನ ಮೂಡಿಸಿದ ಶ್ರೀರಾಮುಲು ರಾಜಕೀಯ ನಡೆ..!