Karnataka TV Impact: ನಿಷೇಧಿತ ಪ್ಲಾಸ್ಟಿಕ್ ಗೋಡೌನ್ ಮೇಲೆ ಹು-ಧಾ ಪಾಲಿಕೆ ಅಧಿಕಾರಿಗಳಿಂದ ದಾಳಿ

Hubli News: ಹುಬ್ಬಳ್ಳಿ: ನಿಷೇಧಿತ ಪ್ಲಾಸ್ಟಿಕ್ ಗೋಡೌನ್ ಮೇಲೆ ಹುಬ್ಬಳ್ಳಿ ಧಾರವಾಡ ಪಾಲಿಕೆ ಅಧಿಕಾರಿಗಳ ದಾಳಿಯಾಗಿದೆ. ಇದು ಕರ್ನಾಟಕ ಟಿವಿ ಇಂಪ್ಯಾಕ್ಟ್ ಆಗಿದ್ದು, ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಟಿವಿ, ಪ್ಲಾಸ್ಟಿಕ್ ಹಾವಳಿ ಹೆಚ್ಚಾದ ಬಗ್ಗೆ ಸುದ್ದಿ ಮಾಡಿತ್ತು.

ಇಂದು ಹುಬ್ಬಳ್ಳಿ-ಧಾರವಾಡ ಪಾಲಿಕೆ ಅಧಿಕಾರಿಗಳು, ಅಕ್ರಮವಾಗಿ ಪ್ಲಾಸ್ಟಿಕ್ ತಯಾರು ಮಾಡುತ್ತಿದ್ದ ಗೋಡೌನ್ ಮೇಲೆ ದಾಳಿ ನಡೆಸಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯ ಇಂಡಸ್ಟ್ರೀಯಲ್ ಏರಿಯಾದ ರಜನಿ ಪಾಲಿಪ್ಯಾಕ್ ಪ್ರೈ.ಲೀ ಗೋದಾಮಿನ ಮೇಲೆ, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದೆ.  ಅಧಿಕಾರಿಗಳು 50 ಲಕ್ಷಕ್ಕೂ ಅಧಿಕ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದಾರೆ.

ಈ ಗೋದಾಮಿನಲ್ಲಿ ಪ್ಲಾಸ್ಟಿಕ್‌ಗಳನ್ನು ಅಕ್ರಮವಾಗಿ ತಯಾರು ಮಾಡಲಾಗುತ್ತಿತ್ತು. ಕಳೆದ 12 ವರ್ಷಗಳಿಂದ ಇಲ್ಲಿ ಪ್ಲಾಸ್ಟಿಕ್ ತಯಾರು ಮಾಡಿ, ಬಹುದೊಡ್ಡ ಮಟ್ಟದಲ್ಲಿ ದಾಸ್ತಾನು ಮಾಲಾಗಿದ್ದ ಪ್ಲಾಸ್ಟಿಕ್‌ನ್ನು ಅಧಿಕಾರಿಗಳಉ ವಶಕ್ಕೆ ಪಡೆದಿದ್ದಾರೆ.

About The Author