Manglore News:
ಸರಕಾರ ರಾತ್ರಿವೇಳೆಯಲ್ಲಿ ಧ್ವನಿವರ್ಧಕಗಳ ಮೇಲೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಕಟೀಲು ಕ್ಷೇತ್ರದ ಯಕ್ಷಗಾನ ಮೇಳಗಳ ಯಕ್ಷ ಪ್ರದರ್ಶನದ ಸಮಯವನ್ನು ಬದಲಾವಣೆಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಪುರಾಣ ಪ್ರಸಿದ್ಧ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ನಡೆಸಲ್ಪಡುವ 6 ಯಕ್ಷಗಾನ ಮೇಳಗಳ ಪ್ರದರ್ಶನವನ್ನು ಮುಂದಿನ ತಿರುಗಾಟದಿಂದ ಕಾಲಮಿತಿಗೆ ತರಲು ತೀರ್ಮಾನಿಸಲಾಗಿದೆ.
ರಾತ್ರಿ 10.30 ರಿಂದ 50 ಡೆಸಿಬಲ್‌ಗಿಂತ ಹೆಚ್ಚಿಗೆ ಧ್ವನಿವರ್ಧಕವನ್ನು ಬಳಸಬಾರದು ಎಂದು ಸರಕಾರದಿಂದ ಈಗಾಗಲೇ ದೇವಸ್ಥಾನಗಳಿಗೆ ಸೂಚನೆ ನೀಡಲಾಗಿದೆ. ಪ್ರತೀ ವರ್ಷ ಮೇಳಗಳು ಆರು ತಿಂಗಳು ತಿರುಗಾಟ ನಡೆಸುತ್ತದೆ, ವರ್ಷಕ್ಕೆ ಸುಮಾರು 1,000 ಅಧಿಕ ಪ್ರದರ್ಶನ ನೀಡುತ್ತಿದ್ದು, ರಾತ್ರಿ 8.30ಕ್ಕೆ ಪೂರ್ವರಂಗ ಆರಂಭವಾದರೆ ಬೆಳಗ್ಗಿನ ಜಾವ ಸುಮಾರು 5.30ಕ್ಕೆ ಯಕ್ಷಗಾನ ಮುಗಿಯುತ್ತಿತ್ತು.ಮುಂದಿನ ದಿನಗಳಲ್ಲಿ ಸಂಜೆ 5.30ರಿಂದ ರಾತ್ರಿ 10.30ವರೆಗೆ ಯಕ್ಷಗಾನ ಸೇವೆ ನಡೆಯಲಿದೆ.
ಬಿಜೆಪಿ ಸರ್ಕಾರ ವೈಫಲ್ಯ ಮರೆಮಾಚಲು ಜನೋತ್ಸವ ಬದಲಿಗೆ ಸಾರ್ವಕರ್ ಉತ್ಸವ – ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ