ಯುವಕರ ಪ್ರಕಾರ ಸಿಎಂ ಪಟ್ಟಕ್ಕೆ ಉಪೇಂದ್ರ ಫೇವರಿಟ್..!

ಕರ್ನಾಟಕ ಟಿವಿ : ಹತ್ತು ವರ್ಷ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಅನ್ಯಾಯವಾಯ್ತು. ಇದೀಗ
ರಾಜ್ಯದಲ್ಲಿ ಬಿಜೆಪಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದ್ರೆ ಕರ್ನಾಟಕದ ಜನ ನೆರೆಯಿಂದ ನೊಂದಿದ್ರು ಕಣ್ಣಿರೊರೆಸುವ ಕೆಲಸವನ್ನ ಮೋದಿ ಮಾಡಲಿಲ್ಲ. ಚುನಾವಣಾ ಪ್ರಚಾರಕ್ಕೆ ಬಂದು ಭಾಷಣ ಮಾಡುವ ಮೋಡಿ ಕನ್ನಡಿಗರ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ. ಈಗಾಗಿ ಜನ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಭ್ರಮನಿರಸನ ಗೊಂಡಿದ್ದಾರೆ. ಇನ್ನು ಜೆಡಿಎಸ್ ಈ ವೇಳೆ ಜನಕ್ಕೆ ಇಷ್ಟವಾಗುತ್ತೆ ಅಂತ ಎಲ್ರೂ ಅಂದುಕೊಂಡಿದ್ರು. ಆದ್ರೆ ಕನ್ನಡಿಗರ ಪ್ರಕಾರ ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗಿ ನಟ, ರಾಜಕಾರಣಿ ಉಪೇಂದ್ರರ ಉತ್ತಮ ಪ್ರಜಾಕೀಯ ಕಡೆ ಒಲವು ತೋರಿಸ್ತಿದ್ದಾರೆ.. ಕರ್ನಾಟಕ ಟಿವಿ ನಡೆಸಿದ ಆನ್ ಲೈನ್ ಪೋಲ್ ನಲ್ಲಿ ಎರಡನೇ ತಲೆ ಮಾರಿನ ನಾಯಕರಲ್ಲಿ ಯಾರು ಸಿಎಂ ಆಗಬೇಕು ಅಂದ್ರೆ ಜನರ ಆಯ್ಕೆ ಉಪೇಂದ್ರ ಮೊದಲ ಸಾಲಿನಲ್ಲಿದ್ದಾರೆ. ಉಪೇಂದ್ರ 41%, ಕಾಂಗ್ರೆಸ್ ನ ಡಿಕೆಶಿ 33%, ಚಕ್ರವರ್ತಿ ಸೂಲಿಬೆಲೆ 15%, ಡಿಸಿಎಂ ಅಶ್ವಥ್ ನಾರಾಯಣ್ 6%, ಜೆಡಿಎಸ್ ನ ಸಂಸದ ಪ್ರಜ್ವಲ್ ರೇವಣ್ಣ 5% ಮತಗಳೊಂದಿದೆ ಸ್ಥಾನದಲ್ಲಿದ್ದಾರೆ.

ಯಸ್ ವೀಕ್ಷಕರೇ ನಿಮ್ಮ ಪ್ರಕಾರ ಯಾರು ಸಿಎಂ ಆಗಬೇಕು, ಉಪೇಂದ್ರ, ಚಕ್ರವರ್ತಿ ಸೂಲಿಬೆಲೆ, ಡಿಕೆ ಶಿವಕುಮಾರ್, ಡಾ ಅಶ್ವಥ್ ನಾರಾಯಣ್.. ಪ್ರಜ್ವಲ್ ರೇವಣ್ಣ, ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ

About The Author