Thursday, October 2, 2025

Latest Posts

ಕರೂರ್ ರ್ಯಾಲಿ ದುರಂತ – ವಿಜಯ್‌ ಹೃದಯಸ್ಪರ್ಶಿ ಸಂದೇಶ!

- Advertisement -

ಕರೂರ್‌ನಲ್ಲಿ ವಿಜಯ್‌ ಅವರ ಟಿವಿಕೆ ರ್‍ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿತ್ತು. ಅದರಲ್ಲಿ 40 ಮಂದಿ ಮೃತಪಟ್ಟಿದ್ರು. ಅತಿ ಹೆಚ್ಚು ಜನ ಗಾಯ ಗೊಂಡಿದ್ರು. ವಿಜಯ್‌ ಆಪ್ತರ ವಿರುದ್ಧ ಕೊಲೆ ಯತ್ನ ಸೇರಿ ಹಲವು ಪ್ರಕರಣ ದಾಖಲಿಸಲಾಗಿದೆ. ಸಿಎಂ ಸ್ಟಾಲಿನ್‌ ತನಿಖೆಗೆ ಆಯೋಗ ರಚಿಸಿದೆ. ವಿಜಯ್‌ ಮತ್ತು ಸರಕಾರಗಳು ಮೃತರ ಕುಟುಂಬಗಳಿಗೆ ಒಟ್ಟು 32 ಲಕ್ಷ ರೂ. ಪರಿಹಾರ ಘೋಷಿಸಿವೆ. ಟಿವಿಕೆ ಪಕ್ಷ ಸಿಬಿಐ ತನಿಖೆಗೆ ಆಗ್ರಹಿಸಿದೆ.

ಈ ಮದ್ಯೆ ಕರೂರ್ ಕಾಲ್ತುಳಿತ ಘಟನೆಗೆ ವಿಜಯ್ ಭಾವುಕ ಸಂದೇಶ ನೀಡಿದ್ದಾರೆ. ನನ್ನ ಜೀವನದಲ್ಲಿ ಇಂತಹ ನೋವಿನ ಪರಿಸ್ಥಿತಿಯನ್ನು ನಾನು ಎಂದಿಗೂ ಎದುರಿಸಿಲ್ಲ. ನನಗೆ ತೀವ್ರ ನೋವಾಗಿದೆ. ಎಲ್ಲಾ ರಾಜಕೀಯವನ್ನು ಬದಿಗಿಟ್ಟು, ಸುರಕ್ಷಿತ ಸ್ಥಳಕ್ಕಾಗಿ ನಾವು ಯಾವಾಗಲೂ ಪೊಲೀಸರಿಂದ ಅನುಮತಿಯನ್ನು ಕೇಳುತ್ತೇವೆ.

ಸದ್ಯ ಆದರೆ ಸಂಭವಿಸಬಾರದ ಸಂಗತಿಗಳು ನಡೆದಿವೆ. ನಷ್ಟದಿಂದ ದುಃಖಿಸುತ್ತಿರುವ ಕುಟುಂಬವನ್ನ ಭೇಟಿಯಾಗುತ್ತೇನೆ. ನನ್ನ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿ ಸರ್, ನಾನು ನಿಮ್ಮನ್ನು ವಿನಂತಿಸುತ್ತೇನೆ – ದಯವಿಟ್ಟು ನನ್ನ ಪಕ್ಷದ ಕಾರ್ಯಕರ್ತರಿಗೆ ನೋವುಂಟು ಮಾಡಬೇಡಿ.

ನನಗೆ ಏನು ಬೇಕಾದರೂ ಮಾಡಿ, ಆದರೆ ನನ್ನ ಕಾರ್ಯಕರ್ತರನ್ನು ಬಿಟ್ಟುಬಿಡಿ. ಶೀಘ್ರದಲ್ಲೇ ಪ್ರತಿಯೊಂದು ಸತ್ಯವೂ ಹೊರಬರುತ್ತದೆ ಅಂತ ಕರೂರ್ ಕಾಲ್ತುಳಿತದ ನಂತರ ಟಿವಿಕೆ ಮುಖ್ಯಸ್ಥ ವಿಜಯ್ ಅವರ ಮೊದಲ ಹೇಳಿಕೆ ವೀಡಿಯೊ ಬಿಡುಗಡೆಯಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss