- Advertisement -
Karwar News: ವೃಕ್ಷಮಾತೆ ಎಂದೇ ಪ್ರಸಿದ್ಧ ಪಡೆದಿದ್ದ ತುಳಸಿ ಗೌಡ (86) ಇಂದು ತಮ್ಮ ಹುಟ್ಟೂರಿನಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ತುಳಸಿ ಗೌಡ, ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಹಾಲಕ್ಕಿ ಸಮುದಾಯದ ತುಳಸಿ ಗೌಡ, ಲಕ್ಷಾಂತರ ಮರಗಳನ್ನು ನೆಟ್ಟು ಬೆಳೆಸಿದ್ದರು. ಬೃಹತ್ ಕಾಡನ್ನೇ ಬೆಳೆಸಿದ್ದರು. ಈ ಕಾರ್ಯವನ್ನು ಮೆಚ್ಚಿದ ಕೇಂದ್ರ ಸರ್ಕಾರ ತುಳಸಿ ಗೌಡಗೆ 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. 2023ರಲ್ಲಿ ತುಳಸಿ ಗೌಡ ಅವರಿಗೆ ಧಾರವಾಡ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ, ಗೌರವಿಸಿತ್ತು.
ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಬರೀಗಾಲಿನಲ್ಲಿ ಹಾಲಕ್ಕಿ ಸಮುದಾಯದ ಬುಡಕಟ್ಟು ವೇಶವನ್ನು ತೊಟ್ಟು ತುಳಸಿ ಗೌಡ, ರಾಷ್ಟ್ರಪತಿ ಮತ್ತು ಪ್ರಧಾನಿ ಮೋದಿಯವನ್ನು ಭೇಟಿ ಮಾಡಿದ್ದರು.
- Advertisement -