- Advertisement -
Kasaragod News:
ಕಾಸರಗೋಡಿನಲ್ಲಿ ಕಾಡು ಹಂದಿ ಭೇಟೆಯಾಡಿದವರು ಪೊಲೀಸರ ಅತಿಥಿಯಾಗಿದ್ಧಾರೆ.ಕಾಡು ಹಂದಿ ಭೇಟೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಅರಣ್ಯ ಇಲಾಖೆ ಸಿಬಂದಿ ಬಂಧಿಸಿದ್ದಾರೆ
ರಾಜಪುರದ ತಂಬಾನ್ (58) , ಮಹೇಶ್ (45) , ಮಿಥುನ್ (26) ಹಾಗೂ ವಿಪಿನ್ ( 28) ಬಂಧಿತರು. ರಾಜಪುರ ಅಯೋಟ್ ಎಂಬಲ್ಲಿ ಕಾಡು ಹಂದಿಯನ್ನು ಮಾಂಸ ಮಾಡುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ವರದಿ ನೀಡಿದ್ದಾರೆ.
ಕಾಸರಗೋಡು ಕುಂಬಳೆಯ ಸಮೀಪದ ಉಪ್ಪಳ ಪರಿಸರದಿಂದ ಹಂದಿಯನ್ನು ಭೇಟೆಯಾಡಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.
- Advertisement -