Kasaragod News:
ಕಾಸರಗೋಡಿನ ಬೇಕಲ ಠಾಣಾ ವ್ಯಾಪ್ತಿ ಚೆಂಬರಿಕದಲ್ಲಿ ಚೆಂಬರಿಕ ಕಡಲ ಕಿನಾರೆಯ ಮೇಲೇರಿ ಸಮುದ್ರಕ್ಕೆ ಹಾರಲು ಯತ್ನ ನಡೆಸಿದ್ದು, ಮಹಿಳೆ ಹಾಗೂ ಮೂವರು ಮಕ್ಕಳನ್ನು ರಕ್ಷಿಸಿದ ಘಟನೆ ನಡೆದಿದೆ.
ಮೇಲ್ಪರಂಬದ ಮಹಿಳೆ ಮತ್ತು ಮೂವರು ಮಕ್ಕಳು ಮನೆಯಿಂದ ನಾಪತ್ತೆಯಾಗಿದ್ದು, .ಈ ವೇಳೆ ನಾಪತ್ತೆ ಕುರಿತು ಮೇಲ್ಪರಂಬ ಪೊಲೀಸರಿಗೆ ದೂರು ನೀಡಲಾಗಿತ್ತು. ಬಳಿಕ ಮನೆಗೆ ತಲಪಿ ಮಾಹಿತಿ ಕಲೆ ಹಾಕಿದಾಗ ಆಟೋ ರಿಕ್ಷಾವೊಂದರಲ್ಲಿ ನಾಲ್ವರು ತೆರಳಿದ್ದಾರೆ ಎಂಬ ಮಾಹಿತಿ ಲಭಿಸಿದ್ದು ಆಟೋ ಚಾಲಕನ ಮೊಬೈಲ್ ನಂಬರ್ ಗೆ ಸಂಪರ್ಕಿಸಿದ ಪೊಲೀಸರು ವಿಚಾರಿಸಿದಾಗ ಚೆಂಬರಿಕ ಬಳಿ ಇಳಿದಿರುವುದಾಗಿ ಮಾಹಿತಿ ನೀಡಿದ್ದು, ಇದರಂತೆ ಪೊಲೀಸರು ಕಿಯೂರಿನಲ್ಲಿರುವ ಉಪಠಾಣೆಗೆ ಸಂದೇಶ ನೀಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಶೋಧ ನಡೆಸಿದ್ದಾರೆ. ಚೆಂಬರಿಕ ಕಡಲ ಕಿನಾರೆಯ ಮೇಲೇರಿ ಸಮುದ್ರಕ್ಕೆ ಹಾರಲು ಯತ್ನ ನಡೆಸಿದ್ದು, ಮಹಿಳೆ ಹಾಗೂ ಮೂವರು ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಪೊಲೀಸರು.
ರಾಜ್ಯದಲ್ಲಿನ ಮಳೆ ನಿರ್ವಹಣೆಗಾಗಿ 300 ಕೋಟಿ ರೂ ಬಿಡುಗಡೆ – ಸಿಎಂ ಬೊಮ್ಮಾಯಿ