Wednesday, October 15, 2025

Latest Posts

ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು- ಪ್ರತಾಪ್ ಸಿಂಹ

- Advertisement -

ಮೈಸೂರು : ಕೇರಳದ ಕಾಸರಗೋಡಿನಲ್ಲಿ ಕನ್ನಡ ಭಾಷೆಯಲ್ಲಿದ್ದ ಊರುಗಳ ಹೆಸರನ್ನ ಮಲಯಾಳಿ ಭಾಷೆಗೆ ಬದಲಾವಣೆ ಮಾಡಿರುವ ವಿಚಾರ ಸಂಬಂಧ, ಕಾಸರಗೋಡಿನಲ್ಲಿ ಕನ್ನಡವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ ಮೈಸೂರಿನಲ್ಲಿ ಮಾತನಾಡಿದ ಅವರು, ಈ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು, ಸಾಹಿತಿಗಳು, ರಾಜಕೀಯ ಪಕ್ಷಗಳು ಧ್ವನಿ ಎತ್ತಬೇಕು. ಕೇರಳ ಸರ್ಕಾರದ ಮೇಲೆ ಕರ್ನಾಟಕ ಸರ್ಕಾರ ಒತ್ತಡ ಹಾಕಿ ಕೆಲಸ ತಡೆಯಬೇಕು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕಿದೆ. ಆದ್ರೆ, ಇಷ್ಟು ವರ್ಷಗಳಿಂದ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಕೊಂಡು ಬಂದಿದ್ದೇವೆ. ಆ ಭಾಗದಲ್ಲಿ ಮಾತ್ರ ಅಲ್ಲಿನ ಸರ್ಕಾರ ಕನ್ನಡವನ್ನೇ ಸಂಪೂರ್ಣವಾಗಿ ನಾಶ ಮಾಡಲು ಪ್ರಯತ್ನ ಮಾಡ್ತಿದೆ. ಇನ್ಮುಂದೆ ಇದನ್ನ ಸಹಿಸಲ ಸಾಧ್ಯವಿಲ್ಲ. ನಮ್ಮ ಈ ಒತ್ತಡದ ಧ್ವನಿ ಕೇಂದ್ರ ಸರ್ಕಾರಕ್ಕೂ ತಲುಪಬೇಕು ಎಂದು ಪ್ರತಾಪ್ ಸಿಂಹ ತಮ್ಮ ಆಕ್ರೋಶವನ್ನ ಹೊರಹಾಕಿದ್ರು.

- Advertisement -

Latest Posts

Don't Miss