ಬೆಂಗಳೂರು: ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನಕ್ಕೆ ನೀಡುವ ಸಬ್ಸಿಡಿಯನ್ನು ರಾಜ್ಯ ಸರ್ಕಾರ ಮುಂದುವರಿಸಿದೆ. ಕಾಶಿ, ಪ್ರಯಾಗ್ರಾಜ್,ವಾರಣಾಸಿಗೆ ಹೋಗ ಬಯಸುವವರಿಗೆ ಸರ್ಕಾರದಿಂದ ಬರೋಬ್ಬರಿ ಐದು ಸಾವಿರ ರೂಗಳನ್ನು ಪಾವತಿ ಮಾಡಲಾಗುವುದು.
ರೈಲ್ವೆ ಇಲಾಖೆಯು ಕಾಶಿ ಯಾತ್ರೆಗೆ ತೆರಳುವವರು 20 ಸಾವಿರ ರೂಗಳ ಪ್ಯಾಕೇಜ್ ಇದ್ದು ಸರ್ಕಾರದಿಂದ 5 ಸಾವಿರ ರಿಯಾಯಿತಿ ದೊರೆಯಲಿದೆ.ಈಗಾಗಲೆ ಕರ್ನಾಟಕದಿಂದ ಮೂರು ಟ್ರಿಪ್ ಆಗಿದ್ದು ನಾಲ್ಕನೇ ಟ್ರಿಪ್ ಬೆಂಗಳೂರಿನಿಂದ ಜುಲೈ 29 ರಂದು ಹೊರಡಲಿದೆ ಎಂದು ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿಯವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಈ ಯಾತ್ರೆ ಒಟ್ಟು ಏಳುದಿನಗಳ ಪ್ರವಾಸವಾಗಿದ್ದು ಈ ವಿಶೇಷ ಪ್ಯಾಕೇಜ್ ನಲ್ಲಿ ತೆರಳುವ ಯಾತ್ರಿಕರಿಗೆ ಊಟ, ತಿಂಡಿ ,ಪ್ರವಾಸ ವೀಕ್ಷಣೆ, ಸ್ಥಳಿಯ ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ.ಈಗಾಗಲೆ ಮೊದಲ ಮೂರು ಟ್ರಿಪ್ ಗಳಲ್ಲಿ 1644 ಜನ ಯಾತ್ರೆಯನ್ನು ಪೂರೈಸಿದ್ದಾರೆ.ಇನ್ನು ಯಾತ್ರೆಯ ನೊಂದಣಿಯನ್ನು ಐ ಆರ್ ಸಿ ಟಿ ಸಿ ಪೋರ್ಟಲ್ ಮೂಲಕ ನೊಂದಾಯಿಸಬಹುದಾಗಿದೆ.
Grhalaxmi Yojana : ಗೃಹಲಕ್ಷ್ಮೀ ಯೋಜನೆಗೆ ನೋಂದಣಿಗಾಗಿ ಹೀಗೆ ಮಾಡಿ..?!
Highway: ಜಮೀನಿನ ಹಣ ಕೊಡಲಿಲ್ಲವೆಂದು ಜನ್ಮ ನೀಡಿದ ತಂದೆಯನ್ನೇ ಸಾಯಿಸಿದ ಮಗ