Political News:
ಅಧಿಕಾರಕ್ಕಾಗಿ ದೇವೇಗೌಡರ ಕುಟುಂಬ ಚಪ್ಪಲಿಯಲ್ಲಿ ಹೊಡೆದಾಡುತ್ತಿದೆ ಎಂಬ ನಳಿನ್‌ಕುಮಾರ್ ಹೇಳಿಕೆಗೆ ವಿಜಯಪುರ ನಗರದಲ್ಲಿ ಪಂಚರತ್ನ ರಥಯಾತ್ರೆ ವೇಳೆ ತಿರುಗೇಟು ನೀಡಿದ ಕುಮಾರಸ್ವಾಮಿ, ದೇವೇಗೌಡರ ಕುಟುಂಬದ ಬಗ್ಗೆ ಹಗುರವಾದ ಮಾತನಾಡುವ ಯೋಗ್ಯತೆ ನಳಿನ್‌ಗಿಲ್ಲ ಎಂದು ಹೇಳಿದ್ದಾರೆ
ವಿಜಯಪುರ ಶಾಸಕ ಮತ್ತು ಬಾಗಲಕೋಟೆ ಸಚಿವ ಹೊಡೆದಾಡುತ್ತಿರುವ ಬಗ್ಗೆ ಮೊದಲು ಗಮನ ಹರಿಸಿ. ದೇವೇಗೌಡರ ಧೂಳಿಗೂ ನೀವು ಸಮವಲ್ಲ. ಅವರ ಕುಟುಂಬದ ವಿಚಾರ ಬಿಟ್ಟುಬಿಡಿ ಎಂದು ವಾಗ್ದಾಳಿ ನಡೆಸಿದರು. ನಿಮ್ಮ ದುರಹಂಕಾರ ಮಿತಿ ಮೀರಿದೆ. ರಾಜ್ಯದಿಂದ ಟೆಂಟ್ ಕಿತ್ತೊಯ್ಯಬೇಕಾದ ಪರಿಸ್ಥಿತಿ ನಿಮಗೆ ಬರಲಿದೆ. ನೆರೆಯ ರಾಜ್ಯಗಳ ಮತದಾರರಂತೆ ನಮ್ಮ ರಾಜ್ಯದ ಮತದಾರರೂ ದುರಹಂಕಾರಿ ರಾಷ್ಟ್ರೀಯ ಪಕ್ಷಗಳನ್ನು ದೂರ ಇಡಬೇಕು. ಅದಕ್ಕಾಗಿ ಜನ ಜೆಡಿಎಸ್‌ಗೆ ಹಾರೈಸಬೇಕು ಎಂದವರು ಇದೇ ವೇಳೆ ಮನವಿ ಮಾಡಿದ್ದಾರೆ.
ಸವಿತಾ ಮಹರ್ಷಿ,ಮಡಿವಾಳ ಮಾಚಿದೇವ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ: ಡಾ.ಹೆಚ್ ಎಲ್ ನಾಗರಾಜು