Monday, October 6, 2025

Latest Posts

KBC: ₹1 ಕೋಟಿಯ ಪ್ರಶ್ನೆ – ಆದಿವಾಸಿ ಹುಡುಗ ಗೆದ್ದಿದ್ದೆಷ್ಟು?

- Advertisement -

ಹಿಂದಿಯಲ್ಲಿ ಕೌನ್ ಬನೇಗಾ ಕರೋಡ್​​ಪತಿ ಕಾರ್ಯಕ್ರಮ ತುಂಬಾನೇ ಫೇಮಸ್​​.. ಅಮಿತಾಬ್ ಬಚ್ಚನ್ ನಡೆಸಿಕೊಡೋ ಈ ಕಾರ್ಯಕ್ರಮದಲ್ಲಿ ಆದಿವಾಸಿ ಯುವಕನೊಬ್ಬ ಮೊದಲ ಬಾರಿ ಹಾಟ್​​ಸೀಟ್ ಏರಿದ್ದ.. 14 ಪ್ರಶ್ನೆಗಳಿಗೂ ಸರಿಯಾದ ಉತ್ತರ ಕೊಟ್ಟಿದ್ದ.. ರೋಚಕವಾಗಿದ್ದ ₹1 ಕೋಟಿಯ ಕಡೇ ಪ್ರಶ್ನೆ ಹೇಗಿತ್ತು? ಆತನ ಉತ್ತರ ಏನು? ₹1 ಕೋಟಿ ಹಣ ಗೆದ್ದನಾ? ಈ ಮುಂದೆ ಓದಿ

ಅಮಿತಾಬ್ ಬಚ್ಚನ್​​  ಕೌನ್ ಬನೇಗಾ ಕರೋಡ್​​ಪತಿ ಸೀಸನ್ 16ನ್ನು ನಡೆಸಿಕೊಡ್ತಿದ್ದಾರೆ. ಮಧ್ಯಪ್ರದೇಶದ ಸಣ್ಣ ಹಳ್ಳಿಯೊಂದರಲ್ಲಿ ಬಂದ ಆದಿವಾಸಿ ಯುವಕನೊಬ್ಬ ಹಾಟ್​ ಸೀಟ್​​​ ಏರೋ ಅವಕಾಶ ಪಡೆದುಕೊಂಡಿದ್ದ.. ಆತನ ಹೆಸರು ಬಂಟಿ ವಡಿವಾ.. ಈತನ ಮನೆ ಪರಿಸ್ಥಿತಿ ತೀರಾ ಕಷ್ಟದಲ್ಲಿತ್ತು.. ಒಂದೊತ್ತಿನ ಊಟಕ್ಕೂ ಪರದಾಟುವಂತಾ ಪರಿಸ್ಥಿತಿ.. ಆದ್ರೆ ಈತನ ಜ್ಞಾನ ಮಾತ್ರ ಅಪಾರವಾದ್ದು.. ಬಡತನದಲ್ಲಿದ್ರೂ ಜ್ಞಾನಿಯಾಗಿರೋ ಬಂಡಿ ವಡಿವಾ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ 15ನೇ ಪ್ರಶ್ನೆವರಗೂ ಬಂದಿದ್ದೇ ರೋಚಕ..

ಬಂಟಿ ವಡಿವಾ ಮೊದಲನೇ ಪ್ರಶ್ನೆಯಿಂದಲೂ ಅಮಿತಾಬ್ ಅವ್ರು ಕೇಳೋ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗಿದ್ರು.. 10 ಸಾವಿರ, 3ಲಕ್ಷದ 20 ಸಾವಿದ ಸ್ಟೇಜ್​ ಅನ್ನೂ ಕಂಪ್ಲೀಟ್ ಮಾಡಿದ್ರು.. 11,12,13, ಹೀಗೆ 14ನೇ ಪ್ರಶ್ನೆವರೆಗೂ ಬಂದ್ರು.. ಅಷ್ಟರಲ್ಲಿ ಇದ್ದ 3 ಲೈಫ್​​ಲೈನ್​​ಗಳನ್ನೂ ಬಳಸಿದ್ರು.. ಬಂಟಿ ವಡಿವಾ 14ನೇ ಪ್ರಶ್ನೆಗೂ ಸರಿಯಾದ ಆನ್ಸರ್ ಕೊಟ್ಟು 50ಲಕ್ಷವನ್ನೂ ತನ್ನದಾಗಿಸಿಕೊಂಡಿದ್ರು… ಆದ್ರೆ 15ನೇ ಪ್ರಶ್ನೆ.. 1 ಕೋಟಿಯ ಪ್ರಶ್ನೆ… ಈ ಪ್ರಶ್ನೆಗೂ ಸರಿ ಉತ್ತರ ಕೊಟ್ಟರೆ 1 ಕೋಟಿ, ತಪ್ಪು ಉತ್ತರ ಕೊಟ್ರೆ ಕೈಗೆ ಸಿಗೋದು ಬರೀ 3 ಲಕ್ಷದ 20ಸಾವಿರ.. ಒಂದು ವೇಳೆ ಕ್ವಿಟ್ ಮಾಡಿದ್ರೆ 50 ಲಕ್ಷ ಆದ್ರೂ ಸಿಗುತ್ತೆ.. ಬಂಟಿ ವಡಿವಾಗೆ ಎದುರಾದ ಪ್ರಶ್ನೆ ಏನು? ಆತ ಹೇಳಿದ್ದೇನು ನೋಡಿ

ಕರೋಡ್​​ಪತಿಯಲ್ಲಿನ 15ನೇ ಪ್ರಶ್ನೆ ಏನಾಗಿತ್ತು ಅಂದ್ರೆ ‘‘1948ರಲ್ಲಿ ಬಂಗಾಳಿ ಶಿಲ್ಪಿ ಚಿಂತಾಮೋನಿಕರ್​ ಅವರು ದಿ ಸ್ಟ್ಯಾಗ್ ಎಂಬ ಕಲಾಕೃತಿಗಾಗಿ ಯಾವ ಪ್ರಶಸ್ತಿ ಪಡೆದರು? ’’ಇದು ಪ್ರಶ್ನೆ.. ಇದಕ್ಕೆ 4 ಆಪ್ಷನ್ ಕೂಡ ಕೊಡಲಾಗಿತ್ತು.

  1. ಪೈಥಾಗರಸ್ ಪ್ರಶಸ್ತಿ
  2. ನೊಬೆಲ್ ಪ್ರಶಸ್ತಿ
  3. ಒಲಿಂಪಿಕ್ ಪದಕ
  4. ಆಸ್ಕರ್ ಪ್ರಶಸ್ತಿ

ಆದ್ರೆ ಬಂಟಿಗೆ ಇದು ಗೊತ್ತಾಗಲೇ ಇಲ್ಲ.. ಬಂಟಿ ತಿಂಗಳ ಆದಾಯ 11 ಸಾವಿರ ಇತ್ತು. ತಮ್ಮ ಊರಿನಿಂದ ಮುಂಬೈಗೆ ಬರುವಾಗ ಆತನ ಜೇಬಲ್ಲಿ ಇದ್ದಿದ್ದು ಬರೀ 260 ರೂಪಾಯಿ.. ಇಂಥಾ ಟೈಮಲ್ಲಿ ತಪ್ಪು ಉತ್ತರ ಕೊಟ್ರೆ ಬರೀ 3 ಲಕ್ಷದ 20 ಸಾವಿರವಷ್ಟೇ ಈತನದ್ದಾಗುತ್ತೆ. ಕ್ವಿಟ್ ಮಾಡಿದ್ರೆ ಕಡೇ ಪಕ್ಷ 50ಲಕ್ಷವಾದ್ರೂ ಆತನದ್ದಾಗುತ್ತೆ. ಹೀಗಾಗಿ ಬಂಟಿ 15ನೇ ಪ್ರಶ್ನೆಗೆ ಉತ್ತರಿಸಲು ಆಗದೇ ಪಂದ್ಯವನ್ನ ಕ್ವಿಟ್ ಮಾಡಿದ್ರು. 50ಲಕ್ಷವನ್ನ ತನ್ನದಾಗಿಸಿಕೊಂಡ್ರು

‘‘1948ರಲ್ಲಿ ಬಂಗಾಳಿ ಶಿಲ್ಪಿ ಚಿಂತಾಮೋನಿಕರ್​ ಅವರು ದಿ ಸ್ಟ್ಯಾಗ್ ಎಂಬ ಕಲಾಕೃತಿಗಾಗಿ ಯಾವ ಪ್ರಶಸ್ತಿ ಪಡೆದರು? ’’

ಈ ಪ್ರಶ್ನೆಗೆ ಸರಿಯಾದ ಉತ್ತರ

3. ಒಲಿಂಪಿಕ್ ಪದಕ

ಬಂಟಿ ಗೆದ್ದ ಈ ಹಣದಲ್ಲಿ ತನ್ನ ತಂದೆ ಮಾಡಿದ್ದ ಸ್ವಲ್ಪ ಸಾಲವನ್ನ ತೀರಿಸ್ತೀನಿ, ಜೀವನದಲ್ಲಿ ತುಂಬಾ ಕಷ್ಟಪಟ್ಟಿದ್ದೀನಿ ಅಂತ ಕಣ್ಣೀರಿಟ್ಟಿದ್ದಾನೆ..

 

- Advertisement -

Latest Posts

Don't Miss