ಕೆಡಿಪಿ ಸಭೆಗೆ ಜೆಡಿಎಸ್ ಶಾಸಕರು ಗೈರು

ಮಂಡ್ಯ: 6 ತಿಂಗಳ ಬಳಿಕ ಜಿಲ್ಲಾ ಮಟ್ಟದ ಕೆಡಿಪಿ ಸಭೆ ನಡೆಯಿತು. ಸಚಿವ ಕೆ.ಗೋಪಾಲಯ್ಯ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆದಿದ್ದು,ಜಿಲ್ಲಾ ಪಂಚಾಯತಿ ಕಾವೇರಿ ಸಭಾಂಗಣದಲ್ಲಿ ಸಭೆಯನ್ನು ನಡೆಸಲಾಗಿತ್ತು.

ಚರ್ಮಗಂಟು ರೋಗಕ್ಕೆ ಸೂಕ್ತ ಚಿಕಿತ್ಸೆ ಒದಗಿಸಿ: ಕೆ.ಗೋಪಾಲಯ್ಯ

ಸಭೆಗೆ ಜಿಲ್ಲೆಯ ಜೆಡಿಎಸ್ ಶಾಸಕರು ಗೈರುಹಾಜರಾಗಿದ್ದರು. ಕೆಡಿಪಿ ಸಭೆ ಕರೆಯದ ಸಚಿವರ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ  ಶಾಸಕರು ವ್ಯಕ್ತಪಡಿಸಿದ್ದರು. ಸಭೆ ಆರಂಭವಾದರೂ ಜಿಲ್ಲೆಯ ಶಾಸಕರು ಒಬ್ಬರೂ ಸಭೆಗೆ ಹಾಜರಾಗಲಿಲ್ಲ. ಕೆಡಿಪಿ ಸಭೆ ಕರೆಯಲು ಶಾಸಕರು ಒತ್ತಡ ಹಾಕುತ್ತಿದ್ದರು. ಶಾಸಕ ಸಿಎಸ್ ಪುಟ್ಟರಾಜು, ಡಾ.ಕೆ. ಅನ್ನಧಾನಿ, ಡಿಸಿ ತಮ್ಮಣ್ಣ, ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಎಂ.ಶ್ರೀನಿವಾಸ್ ಗೈರುಹಾಜರಾದ ಶಾಸಕರು.

ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚನೆ : ಸಚಿವ ಕೆ. ಗೋಪಾಲಯ್ಯ

ನುಡಿ ಜಾತ್ರೆಗೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಆಹ್ವಾನ

About The Author