KEA: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ‌ ನ.5ಕ್ಕೆ

ಬೆಂಗಳೂರು: ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ‌ ನಡೆಸುತ್ತಿದ್ದು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸೆ.10ರಿಂದ ಆರಂಭವಾಗಲಿದೆ.

ಸೆ.5ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಅದೇ ದಿನ ಮಾಹಿತಿ ಪುಸ್ತಕ ಕೂಡ ಪ್ರಕಟಿಸಲಾಗುತ್ತದೆ. ಸೆ.30ರವರೆಗೂ ಅರ್ಜಿ ಅಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.

ಅರ್ಜಿ ಶುಲ್ಕ ಪಾವತಿಸಲು ಅ.3 ಕೊನೆ ದಿನ. ನವೆಂಬರ್ 5ರಂದು ಲಿಖಿತ ಪರೀಕ್ಷೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ. ವಿಜ್ಞಾನ, ಮಾನವಿಕ ವಿಭಾಗಗಳ ಒಟ್ಟು 41 ವಿಷಯಗಳ ಅರ್ಹರಿಗೆ ಪರೀಕ್ಷೆ ನಡೆಸಲಾಗುತ್ತದೆ. ಕೆಇಎ ಇದೇ ಮೊದಲು ಈ ಪರೀಕ್ಷೆ ನಡೆಸುತ್ತಿದೆ.

Siddu Dream: ಸ್ಟೆಥಸ್ಕೋಪ್ ಕುತ್ತಿಗೆಗೆ ಹಾಕಿಕೊಂಡು ಓಡಾಡ್ಬೇಕು ಅನ್ನೋ ಆಸೆ ಇತ್ತು. ಮೆಡಿಕಲ್ ಸೀಟೇ ಸಿಗಲಿಲ್ಲ:

Gram panchayath ;ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಭಿನಂದನಾ ಸಮಾರಂಭ.!

Indira canteen: ರಾಜ್ಯಾದ್ಯಂತ ಹೊಸದಾಗಿ 188ಇಂದಿರಾ ಕ್ಯಾಂಟಿನ್ಗಳು ಆರಂಭ..!

About The Author