Technology: ಇಂದಿನ ಕಾಲದಲ್ಲಿ ಕ್ಯಾಮೆರಾಗೆ ಎಷ್ಟು ಬೆಲೆ ಉಂಟು ಅಂದ್ರೆ, ಮೊಬೈಲ್ ಖರೀದಿಸುವವರು ಮೊದಲು ನೋಡುವುದೇ ಕ್ಯಾಮೆರಾ ಕ್ವಾಲಿಟಿ. ಯಾಕಂದ್ರೆ ಸಾವಿರ ಸಾವಿರ ಕೊಟ್ಟು ಕ್ಯಾಮೆರಾ ಖರೀದಿ ಮಾಡಲಾಗದಿದ್ದವರು, ಮೊಬೈಲ್‌ನಲ್ಲೇ ವೀಡಿಯೋ ರೆಕಾರ್ಡ್ ಮಾಡುತ್ತಾರೆ. ಆದರೆ ನಿಮಗೆ ಕ್ಯಾಮೆರಾ ಅವಶ್ಯಕತೆ ಹೆಚ್ಚು ಇದೆ. ಕ್ಯಾಮೆರಾ ಪರ್ಚೇಸ್ ಮಾಡಲೇಬೇಕು ಅಂತಿದ್ದರೆ, ನೀವು ಕ್ಯಾಮೆರಾ ಖರೀದಿಸುವ ಮುನ್ನ ಕೆಲವು ವಿಷಯಗಳನ್ನು ತಿಳಿದಿರಬೇಕು. ಅದೇನು ಅಂತಾ ತಿಳಿಯೋಣ ಬನ್ನಿ..
ಪ್ರೊಫೆಶನಲ್ ಆಗಿ ವೀಡಿಯೋ ಮಾಡೋಕ್ಕೆ ನೀವು ಕ್ಯಾಮೆರಾ ಖರೀದಿ ಮಾಡಲೇಬೇಕಾಗುತ್ತದೆ. ಹಾಗಿದ್ದಾಗ ನೀವು ಮಿರರ್ ಲೆಸ್ ಕ್ಯಾಮೆರಾನೇ ಖರೀದಿ ಮಾಡಬೇಕು. ಆದರೆ ನೀವು ಕಡಿಮೆ ಬೆಲೆಗೆ ಮಿರರ್ಡ್ ಕ್ಯಾಮೆರಾ ಸಿಗತ್ತೆ ಅಂತಾ, ಅಂಥ ಕ್ಯಾಮೆರಾ ಖರೀದಿಸದರೆ, ನಿಮ್ಮ ದುಡ್ಡು ಸುಮ್ಮನೇ ವೇಸ್ಟ್ ಅಂತಾ ನಿಮಗೆ ಮುಂದೊಂದು ದಿನ ಗೊತ್ತಾಗುತ್ತದೆ. ಆದರೆ ನೀವು ಮತ್ತೆ ಅದನ್ನು ಮಾರೋಕ್ಕೆ ಹೋದರೆ, ನಿಮಗೆ ನಷ್ಟವೇ ಆಗತ್ತೆ. ಹಾಗಾಗಿ ಹೆಚ್ಚು ದುಡ್ಡಾದರೂ, ಒಳ್ಳೆಯ ಕ್ವಾಲಿಟಿ ಕ್ಯಾಮೆರಾನೇ ಖರೀದಿಸುವುದು ಉತ್ತಮ.
ಇನ್ನೊಂದು ವಿಷಯ ಅಂದ್ರೆ, ಕಿಟ್‌ಲೆನ್ಸ್ ಬಳಸಿ, ಫೋಟೋ ತೆಗೆಯಲು ಹೋದರೆ, ಮೊಬೈಲ್‌ನಲ್ಲಿ ಬಂದ ರೀತಿಯ ಕ್ವಾಲಿಯೇ ಕಿಟ್ ಲೆನ್ಸ್‌ನಲ್ಲಿ ಬರುತ್ತದೆ. ಹಾಗಾಗಿ ಈ ಲೆನ್ಸ್ ಬಳಸದಿದ್ದರೇ ಉತ್ತಮ. ಅದರ ಬದಲು ಪ್ರೈಮ್ ಲೆನ್ಸ್ ಬಳಸಿದ್ರೆ, ಫೋಟೋ ಕ್ವಾಲಿಟಿ ಚೆನ್ನಾಗಿರುತ್ತದೆ. ಇನ್ನು ನೀವು ಖರೀದಿಸುವ ಕ್ಯಾಮೆರಾದಲ್ಲಿ ನೀವು ಫೋಟೋ ಕೂಡ ತೆಗೆಯುಂತಿರಬೇಕು ಮಮತ್ತು ವೀಡಿಯೋ ಮಾಡುವಂತಿರಬೇಕು.