Wednesday, September 18, 2024

Latest Posts

ಕಾರ್ ತೆಗೆದುಕೊಳ್ಳಬೇಕಾದ್ರೆ ಈ ವಿಷಯವನ್ನು ಗಮನದಲ್ಲಿರಿಸಿ

- Advertisement -

Tech News: ಇತ್ತೀಚಿನ ದಿನಗಳಲ್ಲಿ ಕಾರ್ ತೆಗೆದುಕೊಳ್ಳುವುದು ಕಷ್ಟದ ವಿಷಯವೇನಲ್ಲ. ಮೊದಲೆಲ್ಲ ಶ್ರೀಮಂತರಷ್ಟೇ ಕಾರ್ ಖರೀದಿಸುವುದು ಅಂತಿತ್ತು. ಆದ್ರೆ ಈಗ ಮಧ್ಯಮ ವರ್ಗದವರೂ ಕೂಡ ಕಾರ್ ಖರೀದಿಸಬಹುದಾಗಿದೆ. ಆರಾಮವಾಗಿ ಸ್ಮಾರ್ಟ್ ಫೋನ್ ಬಳಸಿ, ಇಎಮ್‌ಐನಲ್ಲಿ ಪ್ರತೀ ತಿಂಗಳು ಕಂತಿನಲ್ಲಿ ಹಣವನ್ನು ಕಟ್ಟಬಹುದು. ಆದ್ರೆ ಕಾರ್ ಖರೀದಿಸುವಾಗ ನಾವು ಕೆಲವು ತಪ್ಪುಗಳನ್ನು ಮಾಡಬಾರದು. ಅದು ಯಾವುದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ತಪ್ಪು ಅಂದ್ರೆ ಹೊಸ ಕಾರನ್ನು ಖರೀದಿ ಮಾಡಬಾರದು. ಸೆಕೆಂಡ್ ಹ್ಯಾಂಡ್ ಕಾರನ್ನೇ ಖರೀದಿಸಿ. ಅದರಲ್ಲೂ ನೀವು ಈ ಮೊದಲು ಕಾರ್ ಖರೀದಿಸುತ್ತಿದ್ದೀರಿ ಎಂದಲ್ಲಿ, ಸೆಕೆಂಡ್ ಹ್ಯಾಂಡ್ ಕಾರನ್ನೇ ಖರೀದಿಸುವುದು ಒಳ್ಳೆಯದು. ಆದರೆ ಕೆಲವರಿಗೆ ಸೆಕೆಂಡ್ ಹ್ಯಾಂಡ್ ಖರೀದಿಸುವುದು ಅವಮಾನದ ಸಂಗತಿ. ಯಾಕಂದ್ರೆ ಈ ವಿಷಯ ತಿಳಿಯದೇ ಇದ್ದವರು, ಅಯ್ಯ ಅವರು ಸೆಕೆಂಡ್ ಹ್ಯಾಂಡ್ ಕಾರ್ ತೊಕೊಂಡ್ರಾ.. ನಾನೆಲ್ಲೋ ಹೊಸಾ ಕಾರ್ ಅಂದ್ಕೊಂಡೆ ಅಂತಾ ವ್ಯಂಗ್ಯವಾಡುತ್ತಾರೆ. ಹಾಗಾಗಿ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸುವುದು ಅವಮಾನದ ಸಂಗತಿ ಅಂತಲೇ ಕೆಲವರು ಭಾವಿಸುತ್ತಾರೆ.

ಆದ್ರೆ ಬುದ್ಧಿವಂತರ ಲಕ್ಷಣ ಅಂದ್ರೆ, ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸುವುದು. ಅದರಲ್ಲೂ ಆರ್ಥಿಕ ಪರಿಸ್ಥಿತಿ ಅಷ್ಟಕ್ಕಷ್ಟೇ ಅನ್ನುವವರು ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸುವುದು ಉತ್ತಮ. ಆದ್ರೆ ಸಿಕ್ಕಾಪಟ್ಟೆ ಶ್ರೀಮಂತರಿದ್ದು, ಕಂತು ಕಟ್ಟದೇ, ಡೈರೆಕ್ಟ್ ಹಣ ಕೊಟ್ಟು ಕಾರ್ ಖರೀದಿಸುವ ಯೋಗ್ಯತೆ ಹೊಂದಿದ್ದರೆ ಮಾತ್ರ ಹೊಸ ಕಾರ್ ಖರೀದಿಸಬಹುದು.

ಆದ್ರೆ ಹಣಕಾಸಿನ ಸಮಸ್ಯೆ ಇದೆ. ದುಡಿದರೆ ಅಷ್ಟೇ ಹಣ ಬರೋದು. ಕಂತಿನಲ್ಲಿ ಹಣ ಕಟ್ಟುತ್ತೇವೆ ಅಂದ್ರೆ, ಅಂಥವರು ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸುವುದು ಉತ್ತಮ. ಇನ್ನು ಇಂದಿನ ಕಾಲದಲ್ಲಿ ಹೊಸ ಕಾರ್‌ಗೆ ಎಷ್ಟು ಬೆಲೆ ಇದೆಯೋ, ಅದರ ಅರ್ಧ ಬೆಲೆಗೆ ಅಂಥದ್ದೇ ಸೆಕೆಂಡ್ ಹ್ಯಾಂಡ್ ಕಾರ್ ಸಿಗುತ್ತಿದೆ. ಅಲ್ಲದೇ, ಕಾರ್, ಮೊಬೈಲ್ ಬೆಲೆ ವರ್ಷ ಕಳೆದ ಹಾಗೆ ಕಡಿಮೆಯಾಗುತ್ತ ಹೋಗುತ್ತದೆ. ಹಾಗಾಗಿ ಸಿರಿವಂತಿಕೆಯನ್ನು ಹೆಚ್ಚಿಸಬೇಕು ಅಂದ್ರೆ, ಸುಮ್ಮನೆ ಹಣ ಖರ್ಚು ಮಾಡದೇ, ಸೆಕೆಂಡ್ ಹ್ಯಾಂಡ್ ಕಾರ್ ತೆಗೆದುಕೊಳ್ಳುವುದು ಬುದ್ಧಿವಂತಿಕೆ.

- Advertisement -

Latest Posts

Don't Miss