- Advertisement -
ಬೆಂಗಳೂರು: ನಿನ್ನೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರಿನಿಂದ ಹೈದ್ರಾಬಾದ್ ಗೆ ತೆರಳಬೇಕಾಗಿತ್ತು ಆದರೆ ಕೇವಲ ಒಂದು ನಿಮಿಷ ತಡವಾಗಿ ವಿಮಾನ ನಿಲ್ದಾಣಕ್ಕೆ ಬಂದದ್ದಕ್ಕಾಗಿ ವಿಮಾನ ರಾಜ್ಯಪಾಲರನ್ನು ಬಿಟ್ಟು ಹೋಗಿದೆ.
ಅಧಿಕಾರಿಗಳ ನಿರ್ಲಕ್ಷದಿಂದ ರಾಜ್ಯಪಾಲರು ತೆರಳಬೇಕಿದ್ದ ವಿಮಾನ ಹಾರಿಹೋಗಿದೆ. ಪ್ರೋಟೋಕಾಲ್ ಉಲ್ಲಂಘನೆ ಮಾಡಿ ಈ ರೀತಿ ಘಟನೆ ನಡೆದಿದೆ. ನಿನ್ನೆ ಮದ್ಯಾಹ್ನ ಬೆಂಗಳೂರಿನಿಂದ ಹೈದ್ರಾಬಾದ್ ಗೆ ಸಭೆಯಲ್ಲಿ ಪಾಲ್ಗೊಳ್ಳಲು ತೆರಳೆಬೇಕಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೇವಲ ಒಂದು ನಿಮಿಷ ತಡವಾಗಿ ಬಂದಿದ್ದಕ್ಕೆ ವಿಮಾನ ಮಿಸ್ ಮಾಡಿಕೊಂಡಿದ್ದಾರೆ. ಆದರೆ ಲಗೇಜ್ ಗಳನ್ನು ಮೊದಲೆ ತುಂಬಲಾಗಿತ್ತು.
ನಿನ್ನೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ನಂತರ ರಾಜ್ಯಪಾಲರಿಗೆ ಬೇರೆ ವಿಮಾನದ ವ್ಯವಸ್ತೆ ಮಾಡಿ ಹೈದ್ರಾಬಾದ್ ಗೆ ಕಳುಹಿಸಲಾಯಿತು.
- Advertisement -


