ಮಂಡ್ಯ: : ರಾಜಕೀಯ ಬೆರೆಸಿ ಬಿಜೆಪಿ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೀರಿ, 2023ಕ್ಕೆ ಬಿಜೆಪಿಯವರು ತಕ್ಕ ಪಶ್ಚಾತ್ತಾಪ ಅನುಭವಿಸುತ್ತಿರಿ ಎಂದು ಮಳವಳ್ಳಿಯಲ್ಲಿ ಶಾಸಕ ಕೆ.ಅನ್ನದಾನಿ ಕಿಡಿಕಾರಿದ್ದಾರೆ. ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗಿರುವುದಕ್ಕೆ ಖುಷಿ ಇದೆ ಆದರೆ ಸರ್ಕಾರದ ಹಣ 60 ಕೋಟಿ ಬಳಸಿ ಕಾರ್ಯಕ್ರಮ ಮಾಡಿರುವುದು ಸರಿಯಲ್ಲ. ಸರ್ಕಾರದ ಕಾರ್ಯಕ್ರಮ ಮಾಡಬೇಕಾದವರು ದುರ್ಬಳಕೆ ಮಾಡಿಕೊಂಡಿದ್ದಾರೆ.
ದೈಹಿಕ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ : ಪೋಕ್ಸೊ ಕಾಯ್ದೆಯಡಿ ಶಿಕ್ಷಕನನ್ನು ಬಂಧಿಸಿದ ಪೊಲೀಸರು
ದೇಶ ಆಳಿದ ಮಾಜಿ ಪ್ರಧಾನಿ ದೇವೇಗೌಡರನ್ನು ಹೊರಗಿಟ್ಟು ಕಾರ್ಯಕ್ರಮ ಮಾಡಿದ್ದೀರಿ, ಕೆಂಪೇಗೌಡರ ಪ್ರತಿಮೆಗೆ ಕಾರಣರಾಗಿದ್ದು ದೇವೇಗೌಡ್ರು , ಬಿಜೆಪಿಯವರ ಈ ಮಹಾ ಅಪರಾಧಕ್ಕೆ ಮುಂದಿನ ದಿನಗಳಲ್ಲಿ ಅನುಭವಿಸುತ್ತಾರೆ ಈ ದೇಶಕ್ಕೆ ದೇವೇಗೌಡರು ದೊಡ್ಡ ಶಕ್ತಿ, ರೈತ ಪರ ಯೋಜನೆ ಕೊಟ್ಟ ಮಹಾನ್ ನಾಯಕ. ಮುಂದಿನ ದಿನಗಳಲ್ಲಿ ಬಿಜೆಪಿಯವರನ್ನ ಈ ಸಮಾಜ ಕ್ಷಮಿಸುವುದಿಲ್ಲ ಎಂದು ಮಳವಳ್ಳಿ ಶಾಸಕ ಕೆ. ಅನ್ನದಾನಿ ಕಿಡಿಕಾರಿದ್ದಾರೆ.