international story
ಹೌದು ಸ್ನೇಹಿತರೆ ಕೆನಾಡಾದ ವೈದ್ಯರು ವೈದ್ಯ ಲೋಕಕ್ಕೆ ಸವಾಲಾಗಿರುವ ಒಂದು ಚಿಕಿತ್ಸೆಯನ್ನು ಮಾಡಿ ಯಶಸ್ವಿ ನಗೆ ಬೀರಿದ್ದಾರೆ.
ಲಂಡನ್ ನಿಂದ ಸುಮಾರು ನೂರು ಕಿಲೋ ಮೀಟರ್ ದೂರದಲ್ಲಿರುವ ಕೆನಡಾ ದೇಶದ ಪೆಟ್ರೋಲಿಯಂ ಗ್ರಾಮದಲ್ಲಿ ಹೋಮ್ ಡೇ ಕೇರ್ ನ ಹೋರಾಂಗಣದ ಆಟದ ಮೈದಾನದಲ್ಲಿ ಆಟವಾಡುತ್ತಿರುವ ವೇಳೆ ಪಕ್ಕದಲ್ಲಿರುವ ಈಜುಕೊಳದಲ್ಲಿ ಬಿದಿದ್ದರಿಂದ ಕ್ಷಣಮಾತ್ರದಲ್ಲಿ ವೇಲಾನ್ ಎನ್ನುವ 20 ತಿಂಗಳ ಮಗು ಪ್ರಜ್ಱಹೀನವಾಗಿದ್ದು ಕ್ಷಣಮಾತ್ರದಲ್ಲಿ ಆ ಮಗುವನ್ನು ಷಾರ್ಲೆಟ್ ಎಲಿನಾರ್ ಎಂಗಲಾರ್ಟ ಎನ್ನುವ ಆಸ್ಪತ್ರೆಗೆ ತರಲಾಗಿದ್ದು ಅದಾಗಲೆ ಮಗುವಿನ ಹೃದಯ ಬಡಿತ ನಿಂತು ತುಂಬಾಹೊತ್ತು ಆಗಿತ್ತು ಮಗು ಸತ್ತೇಹೋಗಿದೆ ಎಂದು ಕೆಲವರು ಭಾವಿಸಿದ್ದರು ಆದರೆ ಇದನ್ನು ಒಪ್ಪದ ವೈದ್ಯರ ತಂಡ ಸತತ ಮೂರು ಗಂಟೆಗಳ ಕಾಲ ಚಿಕಿತ್ಸೆ ನಡೆಸಿ ಹೃದಯ ಬಡಿತವನ್ನು ಮರುಕಳಿಸಿ ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರು ಗಂಟೆಗಳ ಕಾಲ ಮಗುವಿಗೆ ಸಿಪಿಆರ್ ಅನ್ನು ಪರ್ಯಾಯವಾಗಿ ನೀಡಿದರು. ಇದು ನಿಜವಾಗಿಯೂ ತಂಡದ ಪ್ರಯತ್ನವಾಗಿತ್ತು, ಲ್ಯಾಬ್ ಟೆಕ್ಗಳು ಕೊಠಡಿಯಲ್ಲಿ ಪೋರ್ಟಬಲ್ ಹೀಟರ್ಗಳನ್ನು ಹಿಡಿದಿದ್ದರು, ಇಎಂಎಸ್ ಸಿಬ್ಬಂದಿ ಕೂಡ ಕಂಪ್ರೆಸರ್ಗಳ ಮೂಲಕ ವಾಯುಮಾರ್ಗ ನಿರ್ವಹಿಸುವಲ್ಲಿ ಸಹಾಯ ಮಾಡಿದರು. ಮೆಲಾನ್ ಫೆಬ್ರವರಿ 6 ರಂದು ಆಸ್ಪತ್ರೆಯಿಂದ ಬಿಡುಗಡೆಯಾಯಿತು. ಪೋಷಕರು ಮಗುವಿಗೆ ಮರುಜನ್ಮ ನೀಡಿದ ವೈದ್ಯರಿಗೆ ಧನ್ಯವಾದ ಅರ್ಪಿಸಿದರು.
ಬಸ್ ನಲ್ಲಿ ಪ್ರಯಾಣಿಸುತಿದ್ದ ಮದ್ಯವ್ಯಸನಿ, ಸೀಟಿನ ಮೇಲೆ ಮೂತ್ರ ವಿಸರ್ಜನೆ