political news
ಬೆಂಗಳೂರು(ಫೆ.14): ಈಗಾಗಲೇ ಚುನಾವಣೆಯ ಕಾವು ಹೆಚ್ಚಾಗಿದ್ದು, ಆರೋಪ, ಪ್ರತ್ಯಾರೋಪಗಳು ಜೋರಾಗಿವೆ. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಧ್ಯಮದವರೊಂದಿಗೆ ಮಾತನಾಡಿದ್ದು, ನಾನು ಮಂಡ್ಯದಿಂದಲೇ ಪ್ರಾರಂಭಿಸಿದ್ದೇನೆ. ಮಂಡ್ಯದಲ್ಲಿ ಇಷ್ಟಂದು ದೊಡ್ಡ ಮಟ್ಟದಲ್ಲಿ ಬಿಜೆಪಿ ಯಾವತ್ತೂ ರ್ಯಾಲಿ ಮಾಡಿರಲಿಲ್ಲ. ಇಲ್ಲಿಯವರೆಗೆ ಯಾವತ್ತೂ ಈ ಬೆಳವಣಿಗೆ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವೇಗೌಡ, ಕುಮಾರಸ್ವಾಮಿಗೆ ಅಮಿತ್ ಶಾ ಕೌಂಟರ್ ಕೊಟ್ಟಿದ್ದಾರೆ, ಪರಿವಾರ ರಾಜಕಾರಣದಿಂದ ರಾಜ್ಯಕ್ಕೆ ಮಾರಕ, ದಳಪತಿಗಳ ವಿರುದ್ಧ ಕೇಸರಿ ಚಾಣಕ್ಯ ಕೆಂಡಾಮಂಡಲ. ಜನರ ಅಭಿವೃದ್ಧಿಗೆ ಪರಿವಾರ ರಾಜಕಾರಣ ಕೆಲಸ ಮಾಡಲ್ಲ. ಕಾಂಗ್ರೆಸ್ ಬಗ್ಗೆಯೂ ಅಮಿತ್ ಶಾ ಹೇಳಿಕೆ, ಕರ್ನಾಟಕಕ್ಕೆ 5 ಸಲ ಹೋಗಿರುವೆ, ಮೋದಿಯವರ ಜನಪ್ರೀಯತೆ ಏನು ಅಂತ ಜನಗಳಿಗೆ ಗೊತ್ತು, ಬಹುಮತದಿಂದ ಬಿಜೆಪಿ ಖಂಡಿತಾ ಅಧಿಕಾರಕ್ಕೆ ಬರುತ್ತದೆ ಎಂದರು.
ಹೀಗಾಗಿ ಕುಟುಂಬ ರಾಜಕಾರಣದ ಬಗ್ಗೆಯೇ ಅವರು ಹೇಳಬೇಕು, ಯಾತ್ರೆಗಳ ಬಗ್ಗೆಯೂ ಮಾತನಾಡೋಕೆ ಅವರಿಗೆ ಭಯ ಎಂದು ರೇವಣ್ಣ ಕಿಡಿಕಾರಿದ್ದಾರೆ, ಇನ್ನು ಹೆಚ್ ಡಿ ಕುಮಾರಸ್ವಾಮಿ ಕೂಡ ರಿಯಾಕ್ಟ್ ಮಾಡಿದ್ದು, ನಮ್ಮ ಕುಟುಂಬದವರು ಬ್ಯಾಕ್ ಡೋರ್ ಮುಖಾಂತರ ಬಂದಿಲ್ಲ. ಅಮಿತ್ ಶಾ ಎಲ್ಲಿ ಕೂತಿದ್ದಾರೆ ಯೋಚಿಸ್ಬೇಕಲ್ವಾ..? ಅವರಲ್ಲಿಯೇ ಎಷ್ಟು ಜನ ಅಪ್ಪ ಮಗ ರಾಜಕಾರಣದಲ್ಲಿ ಇಲ್ವಾ? ಸಂವಿಧಾನದಲ್ಲಿ ಅವರವರಿಗೆ ಬಿಟ್ಟ ಅವಕಾಶವಿದೆ. ಪಿಎಫ್ ಐ ಬಗ್ಗೆ ಅಮಿತ್ ಶಾ ಗುಡುಗಿದ್ದು, ದಕ್ಷಿಣ ಕರ್ನಾಟಕ ಹಾಗೂ ಕೇರಳ ಸಮಸ್ಯೆ ಆಗಿತ್ತು. ನಾವು ಪಿಎಫ್ ಐ ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಾಗ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿತ್ತು ಎಂದು ಕಿಡಿಕಾರಿದ್ದಾರೆ.