ಇತ್ತೀಚಿಗೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ನಾನ್‌ವೆಜ್ ತಿನ್ನೋದು ಬಿಟ್ಟಿದ್ದಾರೆ. ಹುಟ್ಟಿನಿಂದ ಮಾಂಸ ಪ್ರಿಯರಾಗಿದ್ದವರು, ನಂತರದಲ್ಲಿ ಆರೋಗ್ಯದ ದೃಷ್ಟಿಯಿಂದ ನಾನ್‌ವೆಜ್ ತಿನ್ನೋದನ್ನ ಬಿಟ್ಟಿದ್ದಾರೆ. ಅದೇ ರೀತಿ ಪ್ರಪಂಚದಲ್ಲೂ ಹಲವರು ನಾನ್ ವೆಜ್ ಬದಲು ಹೆಚ್ಚಾಗಿ ವೆಜ್ ತಿನ್ನೋದಕ್ಕೆ ಪ್ರಾರಂಭಿಸಿದ್ದಾರೆ. ಅಂಥವರಿಗೆಂದೇ ಕೆಎಫ್‌ಸಿ, ವೆಜ್ ಫ್ರೈಡ್ ಚಿಕನ್ ಪರಿಚಯಿಸಲು ಸಜ್ಜಾಗಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕೆಎಫ್‌ಸಿ, ಇದೇ ಜನವರಿ 10ರಂದು ಯುಎಸ್‌ನಲ್ಲಿ ಕೆಎಫ್‌ಸಿ ಮಾಂಸರಹಿತ ಫ್ರೈಡ್ ಚಿಕನ್ ಪರಿಚಯಿಸಲಿದ್ದೇವೆಂದು ಹೇಳಿಕೊಂಡಿದೆ. ಇದಕ್ಕಾಗಿ ಅಲ್ಲಿನ ಕೆಲ ವೆಜ್ ಪ್ರಿಯರು ಕಾತುರದಿಂದ ಕಾಯಯುತ್ತಿದ್ದಾರೆಂದು, ಕೆಲವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಯು ಎಸ್ ಡಾಲರ್ 6.99ಕ್ಕೆ 6 ಪೀಸ್ ವೆಜ್ ಫ್ರೈಡ್ ಚಿಕನ್ ಸಿಗತ್ತಂತೆ. ಇದು ನಗ್ಗೆಟ್ಸ್ ಅಂದ್ರೆ ಕಟ್ಲೇಟ್ ರೀತಿ ಇರುತ್ತೆ ಅಂತಾ ಹೇಳಲಾಗಿದೆ. ಜನವರಿ 10ಕ್ಕೆ ಹಲವರು ಕೆಎಫ್‌ಸಿಗೆ ಲಗ್ಗೆ ಇಡುವುದಕ್ಕೆ ಕಾತರರಾಗಿದ್ದಾರೆ. ಇನ್ನು ಕೆಲ ದಿನಗಳ ಹಿಂದೆಯಷ್ಟೇ ಇದೇ ಕೆಎಫ್‌ಸಿಯಲ್ಲಿ ಫ್ರೈಡ್ ಚಿಕೆನ್‌ನಲ್ಲಿ ಕೋಳಿಯ ತಲೆ ಸಿಕ್ಕು, ಆಕೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನ ಶೇರ್ ಮಾಡಿಕೊಂಡಿದ್ದಳು. ಇದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಂತರ ಫ್ರೀ ಫುಡ್ ನೀಡುವ ಮೂಲಕ, ಕೆಎಫ್‌ಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿತ್ತು.