ಕೆಜಿಎಫ್ ತಾತ ಇನ್ನಿಲ್ಲ..!

ಕೆಜಿಎಫ್ ತಾತ ಹಿರಿಯ ನಟ ಕೃಷ್ಣ ಜಿ ರಾವ್ ನಿಧನರಾಗಿದ್ದಾರೆ.ತುಮಕೂರಿನ ಪಾವಗಡ ಮೂಲದ ಕೃಷ್ಣ ಜಿ ರಾವ್ ಅವರು ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಆಯಾಸಗೊಂಡು, ಆರೋಗ್ಯ ಸ್ಥಿತಿ ಹದಗೆಟ್ಟಿತೆಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಕೆಜಿಎಫ್ ಮತ್ತು ಕೆಜಿಎಫ್ ಚಾಪ್ಟರ್ 2 ಎರಡೂ ಸಿನಿಮಾಗಳಲ್ಲಿಯೂ
ಯಶ್ ಜೊತೆ ನಟಿಸಿ ಜನರ ಮನಗೆದ್ದಿದ್ದ ಕೃಷ್ಣ ಜಿ ರಾವ್ ಅವರನ್ನು ಬೆಂಗಳೂರಿನ ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು
ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ವಿಧಿವಶರಾಗಿದ್ದಾರೆ.ಕೆಜಿಎಫ್ ಪಾತ್ರದ ಮೂಲಕ ಪ್ರಸಿದ್ಧರಾದ ಕೃಷ್ಣ ಜಿ ರಾವ್ ನ್ಯಾನೋ ನಾರಾಯಣಪ್ಪ , ಕೆಮಿಸ್ಟ್ರಿ ಆಫ್ ಕರಿಯಪ್ಪ, ಕ್ರಿಟಿಕಲ್ ಕೀರ್ತನೆಗಳು ಸಿನಿಮಾಗಳಲ್ಲಿಯೂ ಕೃಷ್ಣ ಜಿ ರಾವ್ ನಟಿಸಿದ್ದರು.




