೧೦ ಪಟ್ಟು ಲಾಭದತ್ತ ಕೆಜಿಎಫ್ ಚಾಪ್ಟರ್ ೨

 

೧೦ ಪಟ್ಟು ಲಾಭದತ್ತ ಕೆಜಿಎಫ್ ಚಾಪ್ಟರ್ ೨
ಕೆಜಿಎಫ್ ಚಾಪ್ಟರ್ ೨ ಅಲೆ ದೇಶ ವಿದೇಶಗಳಲ್ಲಿ ಸುನಾಮಿಯಂತೆ ಅಬ್ಬರಿಸುತ್ತಿದೆ. ನಿರೀಕ್ಷೆಯಂತೆಯೇ ಒಂದೇ ವಾರದಲ್ಲಿ ಚಿತ್ರ ದಿನಕ್ಕೆ ನೂರು ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡಿದೆ. ಮೊದಲ ದಿನ ೧೬೪ ಕೋಟಿ ಬಾಕ್ಸಾಫೀಸ್ ಧೂಳಿಪಟ ಮಾಡಿದ ಕನ್ನಡದ ಹೆಮ್ಮೆಯ ಕೆಜಿಎಫ್ ನಿರೀಕ್ಷೆಯಂತೇ ದೊಡ್ಡ ಮೊತ್ತದತ್ತ ಮುನ್ನುಗಿದೆ. ಹಾಗೆ ನೋಡಿದ್ರೆ ಒಂದು ವಾರದಲ್ಲಿ ಒಂದು ಸಾವಿರ ಕೋಟಿ ಅನ್ನೋ ಅತಿಯಾದ ನಿರೀಕ್ಷೆಯನ್ನೂ ಮಾಡಲಾಗಿತ್ತು. ಆದರೆ ಈಗ ಒಂದು ವಾರ ಆಗಿದೆ ಕೆಜಿಎಫ್ ೭೪೯ ಕೋಟಿ ಕಲೆಕ್ಷನ್ ಮಾಡಿದೆ.
ಆದರೆ ಫಾಸ್ಟೆಸ್ಟ್ ಕಲೆಕ್ಷನ್‌ನಲ್ಲಿ ಜಗತ್ತಿನ ಟಾಪ್ ೨ ಸ್ಥಾನದಲ್ಲಿರೋ ರಾಕಿಭಾಯ್ ಹಿಂದಿಯಲ್ಲಿ ಹಿಂದಿನ ಎ¯ಲ್ಲಾ ದಾಖಲೆಗಳನ್ನೂ ಧೂಳೀಪಟ ಮಾಡಿದೆ. ರಾಜಮೌಳಿ ಆರ್‌ಆರ್‌ಆರ್ ೨೬ ದಿನದಲ್ಲಿ ಗಳಿಕೆ ಮಾಡಿದ್ದು ೨೫೬ ಕೋಟಿಯಾದ್ರೆ ಕೆಜಿಎಫ್ ಅದನ್ನು ಒಂದೇ ವಾರದಲ್ಲಿ ಸರಿಗಟ್ಟಿದೆ. ಇನ್ನು ಬಾಹುಬಲಿ ೨ಗೆ ಹೋಲಿಸಿದ್ರೂ ಕೆಜಿಎಫ್ ಚಾಪ್ಟರ್ ೨ ಅಬ್ಬರ ಜೋರಿದೆ..
ರಾಜಮೌಳಿ ಬಾಹುಬಲಿ ಪಾರ್ಟ್ ೨ ಮೊದಲ ದಿನ ೧೨೧ ಕೋಟಿ ಗಳಿಸಿತ್ತು. ಎರಡನೇ ದಿನ ೯೦ ಕೋಟಿ ಗಳಿಸಿತ್ತು. ಮೂರನೇ ದಿನ ೯೧ ಕೋಟಿ ಗಳಿಸಿತ್ತು. ಒಟ್ಟಾರೆ ಗಳಿಕೆಯಲ್ಲಿ ಕೆಜಿಎಫ್ ಸಾವಿರ ಕೋಟಿ ತಲುಪೋದ್ಯಾವಾಗ..? ಆರ್ ಆರ್ ಆರ್ ದಾಖಲೆ ಮುರಿಯೋದು ಗ್ಯಾರಂಟಿ ಆದರೆ ಬಾಹುಬಲಿ ೨ ದಾಖಲೆ ಮುರಿಯೋದು ಕೆಜಿಎಫ್‌ಗೆ ಸಾಧ್ಯಾನಾ ಅನ್ನೋ ಪ್ರಶ್ನೆಗಳಿವೆ.
ಆದ್ರೆ ಬಜೆಟ್ ಲೆಕ್ಕಾಚಾರದಲ್ಲಿ ನೋಡಿದ್ರೆ ಕೆಜಿಎಫ್ ೧೦೦ ಕೋಟಿ ಬಜೆಟ್ ಸಿನಿಮಾ. ಆರ್ ಆರ್ ಆರ್ ಬಜೆಟ್ ೫೫೦ ಕೋಟಿ. ಹಾಗಾಗಿ ನಿರ್ಮಾಪಕರ ಪಾಲಿಗೆ ಕೆಜಿಎಫ್ ಹಾಕಿದ ಬಜೆಟ್‌ಗಿಂತ ೧೦ ಪಟ್ಟು ಹೆಚ್ಚು ಹಣ ತಂದುಕೊಡೋದ್ರಲ್ಲಿ ಅನುಮಾನವಿಲ್ಲ. ಇನ್ನು ಬಾಹುಬಲಿ ೨ ೨೫೦ ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಸಿನಿಮಾ. ಅದರ ವಿಎಫ್‌ಎಕ್ಸ್ಗೆ ನೂರಾರು ಕೋಟಿಗಳಲ್ಲಿ ಖರ್ಚಾಗಿತ್ತು. ಕೆಜಿಎಫ್ ಒನ್ಸ್ ಅಗೇನ್ ಪ್ಗರೊಡ್ಯೂರ‍್ಸ್ ಡಾರ್ಲಿಂಗ್ ಆಗಿದೆ. ೧೦೦ ಕೋಟಿಗೆ ೧೦ ಪಟ್ಟು ತಂದುಕೊಡ್ತಿದೆ. ನಿರ್ಮಾಪಕರಂತೂ ಹಾಕಿದ ಹತ್ತು ಪಟ್ಟು ಬಂದಿದೆ, ಎಷ್ಟು ಬಂದ್ರೂ ಬೋನಸ್ ಅಂತ ಫುಲ್ ಖುಷ್ ಆಗಿದ್ದಾರೆ.

 

About The Author