Thursday, July 31, 2025

Latest Posts

ಕಿಪ್ಪಿ ಕೀರ್ತಿಗಾಗಿ ಚಾಕು ಹಿಡಿದ ಮುತ್ತು!

- Advertisement -

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಫೇಮಸ್ ಆದ ಕಿಪ್ಪಿ ಕೀರ್ತಿಗಾಗಿ ಯುವಕನೊಬ್ಬ, ಚಾಕು ಹಿಡಿದು ಬೆದರಿಕೆ ಹಾಕಿದ ಘಟನೆ ನಡೆದಿದೆ. ಈಗ ಈ ಲವರ್ ಬಾಯ್ ಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಇತ್ತೀಚೆಗಷ್ಟೆ ತುಮಕೂರು ಜಿಲ್ಲೆ, ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಒಂದು ಘಟನೆ ಎಲ್ಲರ ಗಮನ ಸೆಳೆದಿದೆ. ಅದು ಚಾಕು ಹಿಡಿದು ರೀಲ್ಸ್ ಮಾಡಿರುವ ಒಬ್ಬ ಯುವಕನ ಹುಚ್ಚಾಟ ಇದೀಗ ವೈರಲ್ ಆಗಿದೆ.

ಕಿಪ್ಪಿ ಕೀರ್ತಿ ತನ್ನ ಹಾಸ್ಯ ರೀಲ್ಸ್ ಹಾಗು ಪರ್ಸನಾಲಿಟಿ ಮೂಲಕ ಫೇಮಸ್ ಆಗಿದ್ಲು, ಮುತ್ತು ಅಲಿಯಾಸ್ ಬ್ಲಾಕ್ ಕೋಬ್ರಾ ಎಂಬ ಯುವಕನು ಸಾಮಾಜಿಕ ಜಾಲತಾಣದಲ್ಲಿ ಚಾಕು ಹಿಡಿದು ಬೆದರಿಕೆ ಹಾಕುವ ರೀತಿಯ ರೀಲ್ಸ್ ಮಾಡಿದ್ದ. ಈ ಯುವಕ ತನ್ನ ದೂರದ ಲವರ್ ಬಾಯ್ ಇಮೇಜ್ ಗಾಗಿ ಹೊಳೆನರಸಿಪುರದ ಸುನೀಲ್ ಅಲಿಯಾಸ್ ಕಪ್ಪೆಗೆ ವಾರ್ನಿಂಗ್ ರೀಲ್ಸ್ ಮಾಡಿ ಅಪಾಯಕಾರಿಯಾಗಿ ವರ್ತಿಸಿದ್ದಾನೆ.

ಈ ರೀತಿಯ ಅಪಾಯಕಾರಿ ಕೃತ್ಯಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಮುತ್ತುವನ್ನು ಕರೆಸಿಕೊಂಡು ಖಾಕಿ ಡ್ರಿಲ್ ನೀಡಿದ್ದಾರೆ. ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ಪೊಲೀಸರು ಈ ಹುಚ್ಚಾಟಕ್ಕೆ ಬ್ರೇಕ್ ಹಾಕಿದ್ದಾರೆ.

ಮತ್ತೊಂದೆಡೆ, ಮುತ್ತು ಪೊಲೀಸರ ಮುಂದೆ ತಪ್ಪಿನ ಅರಿವಿನೊಂದಿಗೆ ತಾನು ಮುಂದೆ ಈ ರೀತಿಯ ಯಾವುದೇ ವಿಡಿಯೋ ಮಾಡಲ್ಲ ಎಂದು ಹೇಳಿಕೊಂಡಿದ್ದಾನೆ. ಪೋಲೀಸರು ಕೂಡ ಯುವಕರಿಗೆ ಎಚ್ಚರಿಕೆ ನೀಡುತ್ತಾ, ಸಾಮಾಜಿಕ ಜಾಲತಾಣದ ದುರ್ಬಳಕೆ, ಅಥವಾ ಇಂತಹ ಅಪರಾಧಾತ್ಮಕ ಹಂತಕಗಳನ್ನು ನಾವು ಸಹಿಸುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss