Sunday, May 11, 2025

Latest Posts

Cheetha : ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಚೀತಾ ಸಾವು…!

- Advertisement -

National News : ಪ್ರಧಾನ ಮಂತ್ರಿ ಯೋಜನೆ ಅನುಸಾರವಾಗಿ ನಮೀಬಿಯಾದಿಂದ 20 ಚೀತಾಗಳನ್ನು ತರಲಾಗಿತ್ತು. ಆದರೆ ಇತ್ತೀಚೆಗೆ  ರಾಷ್ಟ್ರೀಯ ಉದ್ಯಾನವನದಲ್ಲಿ ಅನೇಕ ಚಿರತೆಗಳು ಸಾವನ್ನಪಿಒದ್ದವು. ಇದೀಗ ಮತ್ತೆ ಇದೇ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಉದ್ಯಾನವನದಲ್ಲಿ ಹೆಣ್ಣು ಚಿರತೆ ‘ಧಾತ್ರಿ’ ಶವವಾಗಿ ಪತ್ತೆಯಾಗಿದೆ. ಸಾವಿಗೆ ಕಾರಣ ತಿಳಿಯಲು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಾಹಿತಿ ದೊರೆತಿವೆ.

ಪ್ರಾಜೆಕ್ಟ್ ಚೀತಾ ಎಂದು ಕರೆಯಲ್ಪಡುವ ಮಹತ್ವಾಕಾಂಕ್ಷೆಯ ಉಪಕ್ರಮದ ಭಾಗವಾಗಿ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ 20 ಚಿರತೆಗಳನ್ನು ಆಮದು ಮಾಡಿಕೊಳ್ಳಲಾದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯ ಸಾವಿನ ಸರಣಿಯಲ್ಲಿ ಇದು ಕೂಡ ಒಂದು ಎಂದು ಹೇಳಆಗಿದೆ. ಇದರೊಂದಿಗೆ ಇದುವರೆಗೆ ಒಟ್ಟು 9 ಚೀತಾಗಳು ಸಾವನ್ನಪ್ಪಿವೆ. ಒಟ್ಟಾರೆ ಮರಣೋತ್ತರ ಪರೀಕ್ಷೆಯ ಬಳಿಕ ಚೀತಾ ಸಾವಿಗೆ ಕಾರಣ ಹೊರ ಬೀಳಲಿದೆ ಎಂದು  ಹೇಳಲಾಗುತ್ತಿದೆ.

- Advertisement -

Latest Posts

Don't Miss