ಮಾಡಿದ್ದುಣ್ಣೋ ಮಾರಾಯ ಎಂಬ ಮಾತಿದೆ. ಉಪ್ಪು ತಿಂದೋರು ನೀರು ಕುಡಿಯಲೇ ಬೇಕು. ಹಾಗೆ ತಪ್ಪು ಮಾಡಿದೋರು ಶಿಕ್ಷೆ ಅನುಭವಿಸಲೇಬೇಕು. ಈ ಮಾತನ್ನ ಯಾಕೆ ಹೇಳ್ತಾ ಇದೀನಿ ಅಂದ್ರೆ
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರ ಗೌಡ ಹಾಗೂ 17 ಮಂದಿ ನ್ಯಾಯಾಂಗ ಬಂಧನದಲ್ಲಿರೋದು ಗೊತ್ತೇ ಇದೆ. ದಿನಕೊಬ್ಬರು ಆರೋಪಿಗಳನ್ನ ಮಾತಾಡಿಸಲು ಹೋಗುವುದು ಸಹಜ. ಹಾಗೆಯೇ ಪವಿತ್ರಗೌಡ ಪುತ್ರಿ ಖುಷಿ ತನ್ನ ಅಜ್ಜಿಯ ಜೊತೆ ಜೈಲಿನಲ್ಲಿರೋ ತನ್ನ ಅಮ್ಮನನ್ನು ನೋಡಲು ಹೋಗಿದ್ದು ಎಲ್ಲರಿಗೂ ಗೊತ್ತು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಪವಿತ್ರ ಮಗಳು ಖುಷಿ ಈಗ ಮತ್ತಷ್ಟು ಖುಷಿಯಲ್ಲಿದ್ದಾಳೆ.
ಅರೇ ಇದೇನಪ್ಪಾ, ಅಮ್ಮಜೈಲಿನಲ್ಲಿದ್ದಾಳ, ಮಗಳು ಖುಷಿಯಲ್ಲಿದ್ದಾಳಾ? ಈ ಪ್ರಶ್ನೆ ಮೂಡುವುದು ಸಹಜ. ವಿಷಯ ಇಷ್ಟೇ, ಪವಿತ್ರ ಗೌಡ ಜೈಲಿನಲ್ಲಿರೋದು ಸತ್ಯ. ಮಗಳು ಖುಷಿ ಸಂಭ್ರಮಿಸಿದ್ದು ಸತ್ಯ. ಹಾಗಂತ ಖುಷಿ ಮನಸ್ಸಿನಿಂದ ಖುಷಿಯಾಗಿಲ್ಲ. ತನ್ನ ಅಮ್ಮ ಕೊಟ್ಟ ಧೈರ್ಯದಿಂದ ಖುಷಿಯಾಗಿದ್ದಾಳೆ. ಖುಷಿ ಈಗ ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನ ಹಾಕಿದ್ದು, ಅಮ್ಮನ ಬಗ್ಗೆ ಗುಣಗಾನ ಮಾಡಿದ್ದಾಳೆ. ಹಾಗಾದರೆ ಖುಷಿ ಹಂಚಿಕೊಂಡ ವಿಷವೇನು ಗೊತ್ತಾ?
ಅವಳು ನನ್ನ ಪ್ರೇರಣೆ, ಎಷ್ಟೇ ಕಷ್ಟದ ಪರಿಸ್ಥಿತಿಯಲ್ಲೂ ಹೇಗೆ ಸ್ಟ್ರಾಂಗ್ ಆಗಿ ಇರಬೇಕು ಎಂದು ಹೇಳಿಕೊಟ್ಟಿದ್ದಾಳೆ. ಅವಳು ಯಾವಾಗಲೂ ಮುಕ್ತ ಮತ್ತು ನನಗೆ ಸಪೋರ್ಟಿವ್ ಆಗಿರುತ್ತಾಳೆ. ಅವಳಂತಹ ತಾಯಿಯನ್ನ ಪಡೆಯಲು ನಾನು ನಿಜವಾಗಿಯೂ ಲಕ್ಕಿ, ನಾನು ನಿನ್ನ ತುಂಬಾ ಪ್ರೀತಿಸುತ್ತೇನೆ ಅಮ್ಮ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ಗೆ ನೆಟ್ಟಿಗರು ಸಾಕಷ್ಟು ಕಮೆಂಟ್‌ಗಳು ಮಾಡುತ್ತಿದ್ದು, ಕೆಲವು ಪಾಸಿಟಿವ್ ಇದ್ದರೆ, ಇನ್ನು ಕೆಲವರು ನೆಗೆಟಿವ್ ಆಗಿ ಕೂಡ ಕಮೆಂಟ್‌ಗಳನ್ನ ಮಾಡುತ್ತಿದ್ದಾರೆ. ಅದೇನೆ ಇರ್ಲಿ ಅಮ್ಮ ಎಷ್ಟೇ ಧೈರ್ಯ ತುಂಬಿದ್ದರೂ, ಅಮ್ಮನಿಗೆ ನಾಲ್ಕು ಗೋಡೆಯ ಮಧ್ಯೆ ಇರುವಾಗ ಮಗಳ ಚಿಂತೆ ಕಾಡಾದೆ ಇರುತ್ತದೆಯೇ? ಅದಕ್ಕೆ ಹೇಳೋದು ಮಾಡಿದ್ದುಣ್ಣೋ ಮಾರಾಯ ಅಂತ. ಅದೆನೇ ಇರಲಿ ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಎನ್ನುವ ಮಾತು ಸುಳ್ಳಾಗುವುದುಂಟೆ.
ಇದಷ್ಟೇ ಅಲ್ಲ. ಸ್ಯಾಂಡಲ್ ಹುಡ್ ನಟಿ ಹಾಗೂ ಫ್ಯಾಷನ್ ಡಿಸೈನರ್ ಆಗಿರುವ ಪವಿತ್ರಗೌಡ ಜೈಲಿಗೆ ಹೋಗುವ ಮುನ್ನ ಸೆಲೆಬ್ರಿಟಿಗಳಿಗೆ ಭಿನ್ನ ವಿಭಿನ್ನವಾಗಿ ಉಡುಪು ಡಿಸೈನ್ ಮಾಡುತ್ತಿದ್ದರು. ಆದ್ರೆ ಪವಿತ್ರಗೌಡ ಜೈಲಿಗೆ ಸೇರಿದ ಬಳಿಕ
ರಾಜರಾಜೇಶ್ವರಿ ನಗರದ ನಿವಾಸದ ಬಳಿ ಇರುವ ರೆಡ್ ಕಾರ್ಪೆಟ್ 777 ಫ್ಯಾಷನ್ ಬೋಟಿಕ್ ಅನ್ನು ಮಗಳು ಖುಷಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದೀಗ ಖುಷಿ ಗೌಡಗೆ ಇದು ಅತಿ ದೊಡ್ಡ ಜವಾಬ್ದಾರಿ ಜೊತೆಗೆ ಟಾಸ್ಕ್ ಆಗಿದೆ.
ರೇಣುಕಾಸ್ವಾಮಿ ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ದರ್ಶನ್ ಗ್ಯಾಂಗ್ ಚಿತ್ರ ಹಿಂಸೆಯನ್ನ ನೀಡಿ ರೇಣುಕಾಸ್ವಾಮಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಈ ಹಿನ್ನಲೆಯಲ್ಲಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನದಲ್ಲಿ ಇರಿಸಿರುವುದನ್ನ ಇಲ್ಲಿ ಸ್ಮರಿಸಬಹುದು.
* ಸ್ವಾತಿ. ಎಸ್.