Cricket News:
ಐಪಿಎಲ್ ಸಿದ್ಧತೆಯಲ್ಲಿರುವ ದೊಡ್ಡಬಳ್ಳಾಪುರದ ಕ್ರಿಕೆಟ್ ಪಟು ಮಹೇಶ್ ಕುಮಾರ್ ಅವರನ್ನು ಖ್ಯಾತ ನಟ ಕಿಚ್ಚ ಸುದೀಪ್ ಭೇಟಿಯಾಗಿ ಮುಂಬರುವ ಪಂದ್ಯಾವಳಿಗೆ ಶುಭ ಕೋರಿದ್ದಾರೆ.ಸಿಸಿಎಲ್ ಪಂದ್ಯಾವಳಿ ಹಿನ್ನಲೆ ಯಲಹಂಕ ಬಳಿಯ ರಾಜನಕುಂಟೆಯಲ್ಲಿನ ಜಸ್ಟ್ ಕ್ರಿಕೆಟ್ ಅಕಾಡೆಮಿಗೆ ಪ್ರಾಕ್ಟೀಸ್ ನಡೆಸಲು ತೆರಳಿದ್ದ ಸುದೀಪ್ ಅದೇ ಅಕಾಡೆಮಿಯಲ್ಲಿ ಪ್ರಾಕ್ಟೀಸ್ ನಡೆಸುತ್ತಿದ್ದ ಮಹೇಶ್ ಕುಮಾರ್ ನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವಂತೆ ಶುಭಕೋರಿರುವ ಸುದೀಪ್ ಮಹೇಶ್ ಅವರ ಕಠಿಣ ಶ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.ಇದೇ ವೇಳೆ ಮಹೇಶ್ ಕುಮಾರ್ ಟ್ವೀಟ್‌ಗೆ ರಿ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ಮುಂಬರೋ ಐಪಿಎಲ್‌ಗಾಗಿ ಮಾಹಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಇನ್ನೂ ಸಿಸಿಎಲ್‌ಗೆ ತಯಾರಿ ನಡೆಸುತ್ತಿರುವ ಸುದೀಪ್ ತಂಡ, ಸಿನಿ ಪತ್ರಕರ್ತರ ತಂಡದ ಜೊತೆ ಸಂಪೂರ್ಣ ದಿನ ಕ್ರಿಕೆಟ್ ಆಡಿ, ಸಮರಾಭ್ಯಾಸ ನಡೆಸಿತು. ಈ ವೇಳೆ, ಮಹೇಶ್ ಬಹುಕಾಲದ ಸ್ನೇಹಿತ ಹಾಗೆ, ಹಿರಿಯ ಕ್ರೀಡಾ ಪತ್ರಕರ್ತ ಯೋಗೇಶ್ ಈಶ್ವರ್ ಭೇಟಿ ಮಾಡಿದ ಮಹೇಶ್, ಹಳೆಯ ದಿನಗಳನ್ನ ಮೆಲುಕು ಹಾಕಿದ್ರು. ಅಲ್ಲದೇ ಭವಿಷ್ಯದ ಕನಸಿನ ಬಗ್ಗೆ ಚರ್ಚಿಸಿದ್ರು.
65ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದ ಕರ್ನಾಟಕದ ದಿವ್ಯಾ ಟಿಎಸ್