Tuesday, September 23, 2025

Latest Posts

ಕಿಚ್ಚು ಹಚ್ತಿದೆ ಕಿಚ್ಚನ ಅವುಕು ರಾಜನ ಲುಕ್.! ಬಾದ್ ಷಾ ಹೊಸ ಲುಕ್ ಗೆ ಜೈಕಾರ ಹಾಕಿದ್ರೂ ಫ್ಯಾನ್ಸ್!

- Advertisement -

ಸೈರಾ ನರಸಿಂಹ ರೆಡ್ಡಿ, ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಬಹು ನಿರೀಕ್ಷಿತ ಸಿನಿಮಾ. ಚಿರು ಸಿನಿಮಾ ಕರಿಯರ್ ನಲ್ಲಿ 151 ಸಿನಿಮಾ. ಮೇಕಿಂಗ್, ಸ್ಟಾರ್ ಕಾಸ್ಟ್ ನಿಂದ ಬಾಲಿವುಡ್ ನಲ್ಲೂ ಹಲ್ ಚಲ್ ಎಬ್ಬಿಸ್ತಿರೋ ಅಪ್ ಕಮ್ಮಿಂಗ್ ಚಿತ್ರ. ಅದ್ರಲ್ಲೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವುಕು ರಾಜಬ ಲುಕ್ ನಲ್ಲಿ ಮೋಡಿ ಮಾಡ್ತಿರೋ ಮೂವೀ.

ಸದ್ಯ ಕಿಚ್ಚನ ಅವುಕು ರಾಜನ ಮೇಕಿಂಗ್ ಝಲಕ್ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಗಡ್ಡ ಬಿಟ್ಟು ಸಖತ್ ಖದರ್ ಲುಕ್ ನಲ್ಲಿ ಬಾದ್ ಷಾ ಸುದೀಪ್ ಮಿಂಚುತ್ತಿದ್ದಾರೆ. ಸುದೀಪನ ಈ ಗೆಟಪ್ ನೋಡಿ ಫ್ಯಾನ್ ಫುಲ್ ಫಿದಾ ಆಗಿದ್ದಾರೆ.

ಇನ್ನು, ಸೈರಾ ನರಸಿಂಹ ರೆಡ್ಡಿ ಸಿನಿಮಾ ಸ್ವಾತಂತ್ರ್ಯ ಭಾರತದ ಮೊದಲ ಹೋರಾಟಗಾರ ಉಯ್ಯಲ ನರಸಿಂಹ ರೆಡ್ಡಿ ಜೀವನಾಧಾರಿತ ಸಿನಿಮಾವಾಗಿದೆ. ಈಗಾಗ್ಲೇ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಮುಂದಿನ ತಿಂಗಳ 2 ರಂದು ಬಿಗ್ ಸ್ಕೀನ್ ನಲ್ಲಿ ನರಸಿಂಹ ರೆಡ್ಡಿ ಅಬ್ಬರ ಶುರುವಾಗಲಿದೆ.

- Advertisement -

Latest Posts

Don't Miss