ಗಾಂಧಿನಗರದಲ್ಲಿ ಸದ್ಯ ಕಿಚ್ಚ ಸುದೀಪ್ ಬಗ್ಗೆಯೇ ಟಾಕ್ ಅಂಡ್ ನ್ಯೂಸ್. ಕಳೆದ ಒಂದು ವಾರವಾಯ್ತು ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾ ಪೈರಸಿ ವಿಚಾರವಾಗಿ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸ್ಟಾರ್ ವಾರ್ ನಡೆದು ಬಿಟ್ಟಿದೆ. ಇದರ ಬೆನ್ನಲ್ಲೇ ಸುದೀಪ್ ಟ್ವೀಟರ್ ಹ್ಯಾಕ್ ನಡೆದಿದೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಕಿಚ್ಚ ಸುದೀಪಣ್ಣ ಟ್ವಿಟ್ಟರ್ ಹ್ಯಾಕ್ ಮಾಡಲು ಪ್ರಯತ್ನ ನಡೆದಿದೆ. ನಿನ್ನೆ ಮಧ್ಯಾಹ್ನ ಮೂರು ಗಂಟೆಯಿಂದ ಸುಮಾರು ಏಳು ಸಲ ಸುದೀಪಣ್ಣನ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಮಾಡಲು ಪ್ರಯತ್ನ ನಡೆದಿದೆ. ಪಾಸ್‌ವರ್ಡ್ ರಿಕ್ವೆಸ್ಟ್ ದೀಪಣ್ಣನ ಮೇಲ್‌ಗೆ ಬಂದಿದೆ. ಸೈಬರ್ ಕ್ರೈಮ್ ಅವರು ಕೂಡಲೇ ಈ ಬಗ್ಗೆ ಗಮನಹರಿಸಲು ಕೋರುತ್ತೇವೆ.” ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.
ಆದ್ರೆ ನಿಜಕ್ಕೂ ಸುದೀಪ್ ಟ್ವೀಟರ್ ಅಕೌಂಟ್ ಹ್ಯಾಕ್ ಆಗಿದೆ ಅನ್ನೋದ ಸ್ವತಃ ಕಿಚ್ಚನೇ ಹೇಳಬೇಕಿದೆ. ಇಂಟ್ರೆಸ್ಟಿಂಗ್ ವಿಷ್ಯ ಏನಂದ್ರೆ ಸುದೀಪ್ ಟ್ವೀಟರ್ ಹ್ಯಾಕ್ ದಿನವೇ ಕಿಚ್ಚ ಟ್ವೀಟರ್ ಗೆ ಪಾದಾರ್ಪಣೆ ಮಾಡಿ ಹತ್ತು ವರ್ಷ ಕಳೆದಿದೆ. ಈ ಬಗ್ಗೆ ಸುದೀಪ್ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
ಅದೇನೆ ಇರಲಿ ಇತ್ತ ಪೈಲ್ವಾನ್ ಪೈರಸಿ ವಿವಾದ ಹಸಿ ಇರುವಾಗ್ಲೇ ಕಿಚ್ಚನ ಟ್ವೀಟರ್ ಗೆ ಕನ್ನ ಹಾಕಲು ಪ್ರಯತ್ನ ಮಾಡಿರೋದು ನಿಜಕ್ಕೂ ಇಡೀ ಗಾಂಧಿನಗರ ಆಶ್ಚರ್ಯಗೊಂಡಿದೆ. ಈ ಪ್ರಕರಣದ ಹಿಂದೆ ಯಾರೋ ಕಾಣದ ಕೈಗಳ ಆಟ ಇದೆ ಅನ್ನೋ ಗುಸು ಗುಸು ಶುರುವಾಗಿದೆ.