ಕರ್ನಾಟಕ ಟಿವಿ : ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಫ್ಯಾಂಟಮ್.. ಜುಲೈ 6ರಿಂದ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ.. ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರದ ನಿರ್ದೇಶನ ಮಾಡ್ತಿದ್ದಾರೆ.. ವಿಶೇಷ ಅಂದ್ರೆ ಈ ಚಿತ್ರಕ್ಕಾಗಿ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದ ಮೂರು ಫ್ಲೋರ್ ಗಳನ್ನ ಬುಕ್ ಮಾಡಲಾಗಿದ್ದು, ಅಲ್ಲಿ ಕಾಡಿನ ಸೆಟ್ ನಿರ್ಮಾಣ ಮಾಡಲಾಗ್ತಿದೆ.. ಪ್ರತಿಯೊಂದು ಫ್ಲೋರ್ ಕೂಡ 18 ಸಾವಿರ ಚದರಡಿಗಳಿದ್ದು , ಅಲ್ಲಿ ಬಹಳಷ್ಟು ಸೀನ್ ಗಳ ಚಿತ್ರೀಕರಣ ನಡೆಯಲಿದೆ.. ಇನ್ನೂ ರಾಜಮಂಡ್ರಿಯಿಂದ ಸುಮಾರು 50 ಲಕ್ಷ ಮೌಲ್ಯದ ಗಿಡಗಳನ್ನು ತರಿಸಿ ಅದರಿಂದ ಕಾಡಿನ ಸೆಟ್ ನಿರ್ಮಿಸಲಾಗ್ತಿದೆ.. ಈಗಾಗ್ಲೇ 40 ಜನ ಈ ಸೆಟ್ ಕೆಲಸದಲ್ಲಿ ನಿರತರಾಗಿದ್ದಾರೆ.. ಹೈದರಾಬಾದ್ ನಲ್ಲೂ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳು ಕೈಗೊಂಡು, ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.. ಇನ್ನೇನು ಕೆಲ ದಿನಗಳಲ್ಲೇ ಸೆಟ್ ಕೆಲಸ ಮುಗಿಯಲಿದ್ದು, ಇಡೀ ಚಿತ್ರತಂಡ ಹೈದರಾಬಾದ್ ಗೆ ಹೋಗಿ ಚಿತ್ರೀಕರಣ ನಡೆಸಲಾಗುತ್ತೆ ಎಂದು ನಿರ್ಮಾಪಕ ಜಾಕ್ ಮಂಜು ತಿಳಿಸಿದ್ದಾರೆ..
ಚಂದನ, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ