www.karnatakatv.net :ಸ್ಯಾಂಡಲ್ ವುಡ್ ನ ಪೈಲ್ವಾನ್ ಕಿಚ್ಚ ಸುದೀಪ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ರಾಜ್ಯಾದ್ಯಂತ ಕೋಟಿಗೊಬ್ಬನ ಜನುಮ ದಿನವನ್ನ ತಮ್ಮದೇ ರೀತಿಯಲ್ಲಿ ಆಚರಿಸುವ ಮೂಲಕ ನೆಚ್ಚಿನ ನಟನಿಗೆ ಶುಭ ಹಾರೈಸಿದ್ದಾರೆ. ತುಮಕೂರಿನಲ್ಲಿ ಕಿಚ್ಚನ ಅಭಿಮಾನಿಗಳು ವಿಶಿಷ್ಟವಾಗಿ ಆಚರಿಸಿದ್ರು.
ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿ, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಚಂದನವನದ ಚೆಂದದ ನಟ ಕಿಚ್ಚ ಸುದೀಪ್ ಗೆ ಇಂದು 48ರ ಸಂಭ್ರಮ. ಈ ದಿನಕ್ಕಾಗಿ ಕಾತೊರೆಯತ್ತಿದ್ದ ಕಿಚ್ಚನ ಅಭಿಮಾನಿಗಳುಗಳು ರಾಜ್ಯಾದ್ಯಂತ ವಿಶಿಷ್ಟ ರೀತಿಯಲ್ಲಿ ಸೆಲಬ್ರೇಟ್ ಮಾಡಿದ್ರು. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ಇಂದು ಕಿಚ್ಚನ ಹುಟ್ಟಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಏರ್ಪಡಿಸೋ ಮೂಲಕ ಅಭಿಮಾನಿಗಳು ಸಂಭ್ರಮಿಸಿದ್ರು. ಇನ್ನು ಕೊರೋನಾ ಹೆಚ್ಚಾದ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಕುರಿತಾಗಿ ಸುದೀಪ್ ಆಡಿದ್ದ ಮಾತಿನಿಂದ ಪ್ರೇರಿತರಾದ ಅಭಿಮಾನಿಗಳು ಇವತ್ತು ಈ ಕಾರ್ಯಕ್ಕೆ ಮುಂದಾದ್ರು.
ಗುಬ್ಬಿಯ ರೋಟರಿ ಹಾಗೂ ಇನ್ನರ್ ವೀಲ್ ಕ್ಲಬ್ ವತಿಯಿಂದ ಈ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಜನರು ಕೊರೋನ ಲಸಿಕೆ ಪಡೆಯುತ್ತಿರುವುದರಿಂದ ರಕ್ತದಾನ ಶಿಬಿರಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿಲ್ಲ. ಇದ್ರಿಂದ ರಕ್ತದ ಅಭಾವ ಎದುರಾಗ್ತಿದೆ. ಇಂಥಾ ಸಮಯದಲ್ಲಿ ಸುದೀಪ್ ಅಭಿಮಾನಿಗಳ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಇಂದಿನ ದಿನಗಳಲ್ಲಿ ಕೊರೊನ ಮಹಾಮಾರಿಗೆ ಒಳಗಾದವರಿಗೆ ರಕ್ತದ ಅವಶ್ಯಕತೆ ಇದೆ. ಸಾಮಾಜಿಕವಾಗಿ ಎಲ್ಲರೂ ಇಂತ ಸಂದರ್ಭದಲ್ಲಿ ಭಾಗಿಯಾಗಿ ಇನ್ನಿತರರ ಬಾಳಿಗೆ ಬೆಳಕು ನೀಡೋಣದು ಮಾನವೀಯ ಮೌಲ್ಯವನ್ನ ಹೆಚ್ಚಿಸಲಿದೆ. ರಕ್ತದಾನ ಮಾಡಿದ 100ಕ್ಕೂ ಹೆಚ್ಚು ದಾನಿಗಳಿಗೆ ಕ್ಲಬ್ ವತಿಯಿಂದ ಪ್ರಮಾಣ ಪತ್ರ ನೀಡಿ, ಗೌರವಿಸಲಾಯಿತು.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು