ಅರೇ, ಇದೇನಪ್ಪಾ, ಸುದೀಪ್ ಅವರಿಗೂ ಕೂಡ ಇಬ್ಬರು ಬಾಸ್ ಇದ್ದಾರ? ಈ ಪ್ರಶ್ನೆ ಸಹಜವಾಗಿಯೇ ಕಾಡುತ್ತೆ. ಕನ್ನಡ ಚಿತ್ರರಂಗದಲ್ಲಿ ಬಾಸ್ ಅಂದ್ರೆ ಡಿ ಬಾಸ್ ಅಲ್ವಾ ? ಬಹುತೇಕರಿಗೆ ಇಂಥದ್ದೊಂದು ಪ್ರಶ್ನೆ ಕಾಡದೇ ಇರದು. ನಿಜ, ದರ್ಶನ್ ಅವರ ಫ್ಯಾನ್ಸ್‌ಗೆ ಮಾತ್ರ ಡಿ ಬಾಸ್. ಮಿಕ್ಕವರಿಗೆ ಹೀರೋ, ಗೆಳೆಯ, ಆಪ್ತ, ಸಹೋದರ ಇತ್ಯಾದಿ…
ನಟ ಸುದೀಪ್ ಅವರಿಗೂ ಕೂಡ ಬಾಸ್ ಇದ್ದಾರೆ. ಅವರೂ ಕೂಡ ಸಿನಿಮಾ ರಂಗದ ಒಬ್ಬರನ್ನು “ಬಾಸ್” ಅಂತ ಕರೆಯೋದುಂಟು. ಹಾಗಾದರೆ, ಸುದೀಪ್ ಇಲ್ಲಿಯವರೆಗೂ ಬಾಸ್ ಅಂತ ಯಾರನ್ನು ಕರೆದಿದ್ದಾರೆ. ಯಾರನ್ನು ಕರೆಯುತ್ತಾರೆ ಗೊತ್ತಾ? ಅಫ್ಕೋರ್ಸ್… ಸಿನಿಮಾರಂಗದಲ್ಲಿ ಬಹುತೇಕ ಮಂದಿ ಕಾಮನ್ ಆಗಿ ಮಾತಾಡೋ ಪದ ಅಂದ್ರೆ ಅದು “ಬಾಸ್” ಎಂಬ ಪದ ಮಾತ್ರ. ಹಾಗೆ ಮಾತಾಡುವ ಶೈಲಿ ಹೇಗಿರುತ್ತೆಂದರೆ, ಏನ್ ಬಾಸ್ ಎಲ್ಲಿದ್ದೀರಿ, ಬಾಸ್ ಅಲ್ಲೇ ಇರಿ ಬರ್ತೀನಿ. ಬಾಸ್ ಹೇಗಿದ್ದೀರಿ? ಹೀಗೆ ಬಾಸ್ ಪದ ಪ್ರಯೋಗ ನಡೆಯುತ್ತಲೇ ಇರುತ್ತೆ.
ಅದೆಲ್ಲಾ ಸರಿ, ನಟ ಕಿಚ್ಚ ಸುದೀಪ್ ಅವರು ಕೂಡ ಚಿತ್ರರಂಗದಲ್ಲಿರುವ ನಟರೊಬ್ಬರನ್ನು ಬಾಸ್ ಅಂತ ಕರೆಯುತ್ತಾರ? ಯೆಸ್, ಹೀಗಂತ ಸ್ವತಃ ಸುದೀಪ್ ಅವರೇ ಮನಬಿಚ್ಚಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಸುದೀಪ್ ಯಾರನ್ನ ಬಾಸ್ ಅಂತ ಕರೀತಾರೆ? ಈ ಬಗ್ಗೆ ಯುಟ್ಯೂಬ್ ಚಾನೆಲ್‌ವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ. ಸುದೀಪ್ ಅವರನ್ನು ಸಂದರ್ಶನ್ ಮಾಡಿರೋದು ಬೇರಾರೂ ಅಲ್ಲ, ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್. ಹೌದು, “ಗೌರಿ” ಸಿನಿಮಾ ಮೂಲಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ. ಚಿತ್ರದ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಈ ಮಧ್ಯೆ ಸಿನಿಮಾ ಪ್ರಚಾರ ಸಲುವಾಗಿಯೇ ಯುಟ್ಯೂಬ್ ಚಾನೆಲ್‌ವೊಂದರಲ್ಲಿ ಸುದೀಪ್ ಅವರನ್ನು ಇಂಟರ್‌ವ್ಯೂ ಮಾಡುವಾಗ ಈ ವಿಷಯ ಸ್ಪಷ್ಟಪಡಿಸಿದ್ದಾರೆ ಸುದೀಪ್.
ಸರಿ ಸುಮಾರು ಮೂರು ದಶಕಗಳತ್ತ ಯಶಸ್ವಿ ಸಿನಿಪಯಣ ಮಾಡಿರುವ ಸುದೀಪ್, ಯಾರನ್ನು ಬಾಸ್ ಅಂತಾರೆ ಎಂಬ ಬಗ್ಗೆ ಈಗೇಕೆ ಮಾತು ಬಂತು ಅನ್ನೋ ಪ್ರಶ್ನೆಗೆ ಉತ್ತರ, ಸಮರ್ಜಿತ್ ಲಂಕೇಶ್ ಅವರು, ಹಲವು ಪ್ರಶ್ನೆಗಳನ್ನು ಕೇಳುತ್ತಲೇ, “ನನ್ನ ಫೇವರಿಟ್ ಹೀರೋ ನೀವು. ನಿಮ್ಮ ಫೇವರಿಟ್ ಹೀರೋ ಯಾರು? ಎಂಬ ಸಮರ್ಜಿತ್ ಲಂಕೇಶ್ ಪ್ರಶ್ನೆಗೆ, ಸುದೀಪ್ ಕೊಟ್ಟ ಉತ್ತರ ಹೀಗಿತ್ತು. “ನನ್ನ ಫೇವರಿಟ್ ವಿಷ್ಣುವರ್ಧನ್ ಸರ್. ಈ ಮಾತನ್ನು ನಾನು ಹಲವಾರು ಸಲ ಹೇಳಿದ್ದೇನೆ. ಹಾಗೆಯೇ ಲೈಫಲ್ಲಿ ನಾನು ಇಬ್ಬರಿಗೆ ಮಾತ್ರ “ಬಾಸ್” ಎಂದು ಕರೆದಿರೋದು. ಒಂದು ನಮ್ಮ ತಂದೆಗೆ. ಈಗಲೂ ತಂದೆಗೆ ನಾನು ಬಾಸ್ ಅಂತಾನೇ ಕರೆಯುತ್ತೇನೆ. ಅದು ಬಿಟ್ಟರೆ, ವಿಷ್ಣು ಸರ್ ಅವರನ್ನು ಬಾಸ್ ಎನ್ನುತ್ತೇನೆ. ನನಗೆ ವಿಷ್ಣುವರ್ಧನ್ ಅವರ ಪರ್ಸನಾಲಿಟಿ ಸಖತ್ ಇಷ್ಟ. ಅವರು ಯಾವಾಗಲೂ ನನ್ನ ಫೇವರಿಟ್ ಎಂದಿದ್ದಾರೆ ಸುದೀಪ್.
ಅದೇನೆ ಇರಲಿ, ಕನ್ನಡ ಸಿನಿಮಾರಂಗದಲ್ಲಿ ಕಿಚ್ಚ ಸುದೀಪ್ ಅವರ ಛಾಪು ವಿಭಿನ್ನ. ಅವರದೇ ಒಂದು ಸ್ಟೈಲ್ ಇದೆ. ಅವರದೇ ಒಂದು ಬ್ರಾಂಡ್ ಇದೆ. ಸುದೀಪ್ ಏನೇ ಮಾಡಿದರೂ ಅದರಲ್ಲೊದು ವಿಶೇಷತೆ ಇದ್ದೇ ಇರುತ್ತೆ. ವಿನಾಕಾರಣ ಅವರು ಯಾರನ್ನೂ ಹೊಗಳುವುದಿಲ್ಲ. ಯಾರನ್ನೂ ಅಪ್ಪುವುದಿಲ್ಲ. ಹಾಗೆ ಯಾರನ್ನೂ ಅಷ್ಟು ಸುಲಭವಾಗಿ ಒಪ್ಪುವುದೂ ಇಲ್ಲ. ತಮಗೆ ಇಷ್ಟವಾದರೆಂದರೆ, ಬಿಗಿದಪ್ಪುಗೆಯ ಪ್ರೀತಿ ಇದ್ದೇ ಇರುತ್ತೆ. ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಸುದೀಪ್, ಸದ್ಯ ಬಹು ನಿರೀಕ್ಷೆಯ “ಮ್ಯಾಕ್ಸ್” ಸಿನಿಮಾ ಬಿಡುಗಡೆಯನ್ನುಎದುರು ನೋಡುತ್ತಿದ್ದಾರೆ. ಅವರಷ್ಟೇ ಅಲ್ಲ, ಅವರ ಫ್ಯಾನ್ಸ್ ಕೂಡ ಮ್ಯಾಕ್ಸ್ ದರ್ಶನಕ್ಕಾಗಿ ಎದುರು ನೋಡುತ್ತಿದ್ದಾರೆ.
ಒಂದಂತೂ ನಿಜ, ಕನ್ನಡ ಸಿನಿಮಾ ಇತಿಹಾಸದಲ್ಲಿ ವಿಷ್ಣುವರ್ಧನ್ ಅವರ ಹೆಸರು ಅಜರಾಮರ. ಅವರ ನಟನೆಗೆ ತಲೆಬಾಗದವರಿಲ್ಲ. ಸುದೀಪ್ ಅವರು ವಿಷ್ಣು ಸರ್ ಅವರನ್ನು ಕಾಣುವ ರೀತಿಯೇ ಅಂಥದ್ದು. ಅವರ ನೆನಪಲ್ಲೇ ವಿಷ್ಣುವರ್ಧನ ಹೆಸರಿನ ಸಿನಿಮಾ ಕಟ್ಟಿಕೊಟ್ಟಿದ್ದು ಕೂಡ ಅದಮ್ಯ ಪ್ರೀತಿ ತೋರುತ್ತೆ. ಅಂದಹಾಗೆ, ಕಿಚ್ಚ ಸುದೀಪ್ ಯಾರನ್ನು ಬಾಸ್ ಅನ್ನುತ್ತಾರೆಂಬ ಸತ್ಯ ಇದು…