ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಳೆ ನೆನಪುಗಳಿಗೆ ಜಾರಿದ್ದಾರೆ. ಅದು 15 ವರ್ಷಗಳ ಹಳೆ ಘಟನೆ ಜೊತೆಗೆ ಆ ಸ್ಥಳಕ್ಕೂ ಭೇಟಿ ಕೊಟ್ಟು ಸವಿಸವಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅಂದಹಾಗೇ ಆ ಜಾಗ ಕೇರಳ. ಮೈ ಆಟೋಗ್ರಾಫ್ ಶೂಟಿಂಗ್ ನಡೆದ ಸ್ಥಳ. ಈ ಜಾಗಕ್ಕೆ ಕಿಚ್ಚ ವಿಸಿಟ್ ಮಾಡಿದ್ದು, ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಫ್ಯಾಂಟಮ್ ಸಿನಿಮಾ ಶೂಟಿಂಗ್ ಗಾಗಿ ಕೇರಳಕ್ಕೆ ಹೋಗಿರುವ ಸುದೀಪ್ ಬಿಡುವಿನ ಸಮಯದಲ್ಲಿ ಮೈ ಆಟೋಗ್ರಾಫ್ ಶೂಟಿಂಗ್ ಮಾಡಿದ ಜಾಗಕ್ಕೆ ಭೇಟಿ ಕೊಟ್ಟಿದ್ದಾರೆ. ಮೈ ಆಟೋಗ್ರಾಫ್ ಸಿನಿಮಾದ ಎರಡನೇ ನಾಯಕಿ ಲತಿಕಾ ಮನೆಯಾಗಿದ್ದ ಸ್ಥಳಕ್ಕೆ ಭೇಟಿ ಕೊಟ್ಟು 15 ವರ್ಷಗಳ ಹಿಂದಿನ ಕಥೆಯನ್ನು ಮೆಲುಕು ಹಾಕಿದ್ದಾರೆ.
ಮನೆಯ ಕಾರಿಡರ್ ನಲ್ಲಿ ರೌಂಡ್ಸ್ ಹಾಕಿದ್ದ ಕಿಚ್ಚ, ಲತಿಕಾ ಮನೆ ಹಾಗೂಅದರ ಸುತ್ತಮುತ್ತ ಚಿತ್ರೀಕರಣ ನಡೆಸಿದ ಜಾಗಕ್ಕೂ ಹೋಗಿದ್ದಾರೆ. ಅಂದಹಾಗೇ ಮೈ ಆಟೋಗ್ರಾಫ್ ಮೂಲಕ ಕಿಚ್ಚ ಸುದೀಪ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಅಲ್ಲದೇ ಈ ಸಿನಿಮಾಕ್ಕೆ ಅವರೇ ಬಂಡವಾಳ ಕೂಡ ಹೂಡಿದ್ದರು.