www.karnatakatv.net: ಕೋವಿಡ್ ನಿಂದ ಗುಣಮುಖರಾದವರಲ್ಲಿ ಕಿಡ್ನಿ ಹಾನಿಯಾಗೋ ಸಾಧ್ಯತೆ ಹೆಚ್ಚಾಗಿದೆ ಅಂತ ಅಧ್ಯಯನವೊಂದು ಆಘಾತಕಾರಿ ಮಾಹಿತಿ ಬಹಿರಂಗಗೊಳಿಸಿದೆ. ಕೋವಿಡ್ ನ ಗಂಭೀರ ಲಕ್ಷಣಗಳ ವಿರುದ್ಧ ಹೋರಾಡಿ ಪಾರಾದವ್ರಲ್ಲಿ ಸೈಲೆಂಟ್ ಆಗಿ ಯಾವ ನೋವೂ ಇಲ್ಲದೆ ಕಿಡ್ನಿ ಫೇಲ್ಯೂರ್ ಆಗೋ ಸಾಧ್ಯತೆ ಹೆಚ್ಚು ಅಂತಲೂ ತಿಳಿಸಿದೆ.
ಯೆಸ್, ಕೋವಿಡ್ ನಿಂದ ಬಳಲಿ ಬೆಂಡಾಗಿ ಹೇಗೋ ಜೀವ ಉಳಿಸಿಕೊಂಡಿರೋವ್ರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರೋವಾಗ್ಲೇ ಇದೀಗ ಈ ಅಧ್ಯಯನದ ವರದಿ ಶಾಕ್ ನೀಡಿದೆ. ಅಮೆರಿಕಾದ ಸೊಸೈಟಿ ಆಫ್ ನೆಫ್ರಾಲಜಿ ಈ ಕುರಿತ ಸಂಶೋಧನೆ ನಡೆಸಿದ್ದು ಈ ಆಘಾತಕಾರಿ ಮಾಹಿತಿಯನ್ನ ತನ್ನ ವೆಬ್ ಸೈಟ್ ನಲ್ಲಿ ಹಂಚಿಕೊಂಡಿದೆ. ಕೋವಿಡ್ 10 ಸಾವಿರ ರೋಗಿಗಳ ಪೈಕಿ ಸುಮಾರು 7.8 ರಷ್ಟು ರೋಗಿಗಳು ಡಯಾಲಿಸಿಸ್ ಅಥವಾ ಮೂತ್ರ ಪಿಂಡ ಕಸಿ ಮಾಡಿಸಿಕೊಂಡಿದ್ದಾರೆ ಅಂತಲೂ ಅಧ್ಯಯನ ಹೇಳಿದೆ. ಇಂತಹ ರೋಗಿಗಳಲ್ಲಿ ಯಾವುದೇ ನೋವಾಗಲೀ, ಲಕ್ಷಣಗಳಾಗಲಿ ಕಾಣಿಸಿಕೊಳ್ಳದೇ ಕಿಡ್ನಿ ವೈಫ್ಯಲ್ಯವಾಗಿದೆ ಅಂತ ತಿಳಿಸಿದೆ. ಇದು ಸಹಜವಾಗಿಯೇ ಈಗ ಕೋವಿಡ್ ರೋಗಿಗಳಲ್ಲಿ ಆತಂಕ ಹೆಚ್ಚಿಸಿದೆ.
ಹೇಗೋ ಜೀವ ತಿನ್ನೋ ಕೊರೋನಾ ವೈರಸ್ ನಿಂದ ಸಾವಿನ ಮನೆ ಕದ ತಟ್ಟಿ ಬಚಾವಾದ್ವಿ ಅಂತ ನಿಟ್ಟುಸಿರು ಬಿಡುವಷ್ಟರಲ್ಲಿಯೇ ಅಮೆರಿಕದ ಅಧ್ಯಯನದ ಈ ಅಘಾತಕಾರಿ ವರದಿ ಹೆದರಿವರ ಮೇಲೆ ಹಾವು ಬಿಟ್ಟಹಾಗಾಗಿದೆ.